ಬೆಳ್ಳಾರೆ: ಅ.7ರಂದು ಕವಿಗೋಷ್ಠಿ , ವಿಚಾರಗೋಷ್ಠಿ
ಸುಳ್ಯ, ಅ, 6: ದ.ಕ. ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆಯ ವತಿಯಿಂದ ಅ.7ರಂದು ಬೆಳ್ಳಾರೆಯ ನಮೃತ ಕಲಾ ಮಂದಿರದಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿ ಆಯೋಜಿಸಲಾಗಿದೆ.
ಮಧ್ಯಾಹ್ನ 1:30ಕ್ಕೆ ’ಭಾವೈಕ್ಯತೆಯ ಭಾರತ’ ಎಂಬ ಆಶಯದೊಂದಿಗೆ ಸೌಹಾರ್ದ ಕವಿಗೋಷ್ಠಿ ಹಾಗೂ ವಿಚಾರಗೋಷ್ಠಿ ನಡೆಯಲಿದೆ. ನಲ್ವತ್ತು ಮಂದಿ ಕವನ ವಾಚಿಸಲಿದ್ದಾರೆ. ಸಾಹಿತಿ ಎಚ್.ಭೀಮರಾವ್ ವಾಷ್ಠರ್ ಅಧ್ಯಕ್ಷತೆ ವಹಿಸವರು. ಬೆಳ್ಳಾರೆ ಆರಕ್ಷಕ ಠಾಣೆಯ ಉಪನಿರೀಕ್ಷಕ ಚೆಲುವಯ್ಯ ಎಂ.ವಿ. ಕಾರ್ಯಕ್ರಮ ಉದ್ಘಾಟಿಸುವರು. ತಾಜುದ್ದೀನ್ ರಹ್ಮಾನಿ, ಮಾಧವ ಗೌಡ ಬೆಳ್ಳಾರೆ, ಅನಿಲ್ ರೋಶನ್ ಲೋಬೊ ವಿಚಾರಗೋಷ್ಠಿ ಮಂಡಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





