ಕೊಣಾಜೆ: ಅಡಿಕೆ ಕಳವು; ಆರೋಪಿ ಸೆರೆ
ಕೊಣಾಜೆ, ಅ. 6: ಮಂಜನಾಡಿ ಗ್ರಾಮದ ಕಲ್ಕಟ್ಟ ಎಂಬಲ್ಲಿ ಅಡಿಕೆ ಅಂಗಡಿಯೊಂದಕ್ಕೆ ನುಗ್ಗಿ ಅಪಾರ ಮೌಲ್ಯದ ಅಡಿಕೆ ಕಳ್ಳತನ ನಡೆಸಿದ್ದ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಕನ್ಯಾನ ಗ್ರಾಮದ ಕಣಿಯೂರು ನಿವಾಸಿ ಸಾಹುಲ್ ಹಮೀದ್ ಯಾನೆ ಹಮೀದ್(43) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಈತ ಸೆ.20 ರಂದು ಕಲ್ಕಟ್ಟದ ಮಹಮ್ಮದ್ ನಾಸಿರ್ ಎಂಬವರ ಅಡಿಕೆ ಅಂಗಡಿಯ ಬೀಗ ಮುರಿದು ಒಳನುಗ್ಗಿ ಸುಮಾರು 81 ಸಾವಿರ ಮೌಲ್ಯದ ಅಡಿಕೆಯನ್ನು ಕಳವು ನಡೆಸಿ ಪರಾರಿಯಾಗಿದ್ದ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಕಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಕೊಣಾಜೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ಹಮೀದ್‌ನನ್ನು ದಸ್ತಗಿರಿ ಮಾಡಿ ಆತನಿಂದ ಸುಮಾರು ಆರು ಗೋಣಿ ಚೀಲ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.
Next Story





