ನ್ಯಾಯಾಂಗ ಪಾರದರ್ಶಕತೆ ಕೊಲೀಜಿಯಂ ತೀರ್ಮಾನಗಳು ಇನ್ನು ಮುಂದೆ ವೆಬ್‌ಸೈಟ್‌ನಲ್ಲಿ

ಹೊಸದಿಲ್ಲಿ, ಅ. 6: ನ್ಯಾಯಾಂಗದ ವ್ಯವಹಾರಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ನ್ಯಾಯಾಧೀಶರ ಬಡ್ತಿ, ವರ್ಗಾವಣೆ, ಖಾತ್ರಿ ಸೇರಿದಂತೆ ಸುಪ್ರೀಂ ಕೋರ್ಟ್ ಕೊಲೀಜಿಯಂ ಕೈಗೊಂಡ ಎಲ್ಲ ತೀರ್ಮಾನಗಳನ್ನು ಸರ್ವೋಚ್ಚ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅಕ್ಟೋಬರ್ 3ರಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೊಲೀಜಿಯಂ ಕೈಗೊಂಡ ನಿಣಯಗಳು ಮತ್ತು ಅವುಗಳ ಹಿಂದಿನ ಕಾರಣಗಳು, ಸರಕಾರಕ್ಕೆ ಕಳುಹಿಸಿದ ಶಿಫಾರಸುಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಹೈಕೋರ್ಟ್ ಪೀಠಗಳಿಗೆ ಬಡ್ತಿ, ಹೈಕೋರ್ಟ್ ನ್ಯಾಯಾಧೀಶರ ಖಾಯಮಾತಿ ವಿವರ, ಹೈಕೋರ್ಟ್ ಮುಖ್ಯ ನ್ಯಾಯಾಧೀಶರು, ಇತರ ನ್ಯಾಯಾಧೀಶರ ವರ್ಗಾವಣೆ, ಸುಪ್ರೀಂ ಕೋರ್ಟ್‌ಗೆ ಬಡ್ತಿ ಸೇರಿದಂತೆ ಕೊಲೀಜಿಯಂ ಕೈಗೊಳ್ಳುವ ಎಲ್ಲ ತೀರ್ಮಾನಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುವುದು.
ಕೊಲೀಜಿಯಂ ವ್ಯವಸ್ಥೆಯಲ್ಲಿ ವಿಶ್ವಾಸಾರ್ಹತೆ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲು ಈ ನಿರ್ಣಯ ಅಂಗೀಕರಿಸಲಾಗಿದೆ ಎಂದು ನಿರ್ಣಯ ಹೇಳಿದೆ.
Next Story





