ಕಾರಿನೊಳಗೆ ಉಸಿರುಕಟ್ಟಿ ಇಬ್ಬರು ಬಾಲಕರು ಮೃತ್ಯು

ಹೊಸದಿಲ್ಲಿ, ಅ. 6: ಲಾಕ್ ಆದ ಕಾರಿನೊಳಗೆ ಉಸಿರಾಡಲು ಸಾಧ್ಯವಾಗದೆ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ದಿಲ್ಲಿಯಲ್ಲಿ ಬುಧವಾರ ನಡೆದಿದೆ.
ಈ ಇಬ್ಬರು ಮಕ್ಕಳು 9 ಗಂಟೆಗಳ ಕಾಲ ಕಾರಿನೊಳಗೆ ಸಿಲುಕಿದ್ದರು. ಮೃತಪಟ್ಟ ಬಾಲಕರನ್ನು ಸೋನು (5) ಹಾಗೂ ರಾಜ್ (6) ಎಂದು ಗುರುತಿಸಲಾಗಿದೆ. ಈ ಕಾರು ಮೃತಪಟ್ಟ ಓರ್ವ ಬಾಲಕನ ತಂದೆಯದ್ದು ಎಂದು ಹೇಳಲಾಗಿದೆ.
ಕಾರಿನ ಚಾಲಕ ರಾಜು ಈ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಬುಧವಾರ ಅಪರಾಹ್ನ ಕಾರನ್ನು ಲಾಕ್ ಮಾಡದೆ ತನ್ನ ಕೊಠಡಿಗೆ ಮಲಗಲು ತೆರಳಿದ್ದ. ಬಳಿಕ ತನ್ನ ರಿಮೋಟ್ ಕೀ ಬಳಸಿ ಕಾರಿನ ಡೋರ್ ಲಾಕ್ ಮಾಡಿದ್ದ. ಈ ನಡುವೆ ಇಬ್ಬರು ಮಕ್ಕಳು ಆ ಕಾರಿನೊಳಗೆ ಪ್ರವೇಶಿಸಿ ಆಟವಾಡುತ್ತಿದ್ದರು. ಆದರೆ, ಉಸಿರಾಡಲು ಸಾಧ್ಯವಾಗದೆ ಬಾಲಕರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
Next Story





