ವಾರಸುದಾರರಿಗೆ ಮನವಿ
ಉಡುಪಿ, ಅ.6: ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಗೆ ಕಳೆದ ಸೆ.20ರಂದು ಒಳರೋಗಿಯಾಗಿ ದಾಖಲಾದ ಸುಮಾರು 70 ವರ್ಷ ಪ್ರಾಯದ ಬಸಪ್ಪಾಶೆಟ್ಟಿ, ಕೇರಾಫ್ ತಲ್ವೆ, ತೀರ್ಥಹಳ್ಳಿ ಎಂಬ ವಿಳಾಸದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ವಾರಸುದಾರರು ಯಾರಾದರೂ ಇದ್ದಲ್ಲಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯವಾಣಿ ಕೇಂದ್ರವನ್ನು (ದೂರವಾಣಿ:0820-2520555) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





