ಸಿ.ಐ.ಇಸ್ಹಾಕ್ ಫಜೀರ್ ಕೃತಿ ದಾರುಲ್ ಅಶ್ಃಅರಿಯ್ಯಾಗೆ ಹಸ್ತಾಂತರ

ಮಂಗಳೂರು, ಅ. 6: ಬರಹಗಾರ ಸಿ.ಐ.ಇಸ್ಹಾಕ್ ಫಜೀರ್ ಬರೆದ 'ಉಮರ್ ಮತ್ತು ಇಬ್ನ್ ಉಮೈರ್'ಎಂಬ ಕೃತಿಯನ್ನು ಪ್ರಕಾಶನಗೈದ ದಾರುಲ್ ಅಶ್ಃಅರಿಯ್ಯ ಸುರಿಬೈಲ್ ನಲ್ಲಿ ಸಾತ್ವಿಕ ವಿದ್ವಾಂಸ ಮರ್ಹೂಂ ಸುರಿಬೈಲ್ ಉಸ್ತಾದರ ಸನ್ನಿಧಿಯಲ್ಲಿ ಪುಸ್ತಕವನ್ನು ಸುರಿಬೈಲ್ ವಿದ್ಯಾಸಂಸ್ಥೆಗೆ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಅಶ್ ಅರಿಯ್ಯಾ ಮೇನೇಜರ್ ಮುಹಮ್ಮದ್ ಅಲಿ ಸಖಾಫಿ ಉಸ್ತಾದ್ ಸಿ.ಐ.ಇಸ್ಹಾಕ್ ಫಜೀರ್ ಪ್ರಸ್ತುತ ಅಲ್ ಹಸ್ಸಾ ದಾರುಲ್ ಅಶ್ಃಅರಿಯ್ಯಾ ಸುರಿಬೈಲ್ ಕಮಿಟಿಯ ಪ್ರ.ಕಾರ್ಯದರ್ಶಿಯಾಗಿದ್ದು, ಸಂಘಟನಾ ಚತುರ, ಉದಾರಿ, ಸಾಹಿತ್ಯ ಸೇವೆಯಲ್ಲಿ ಕಳೆದ ಒಂದು ದಶಕಗಳಿಂದಲೂ ತೊಡಗಿಕೊಂಡ ಉದಯೋನ್ಮುಖ ಬರಹಗಾರ ಇದು ಇವರ ಮೊದಲ ಕೃತಿಯಾಗಿದ್ದು ಇದರ ಎಲ್ಲಾ ವೆಚ್ಚವನ್ನು ತಾನೆ ಭರಿಸಿ ಇದೀಗ ಪುಸ್ತಕವನ್ನು ಅಶ್ಃಹರಿಯ್ಯಾಗೆ ಅರ್ಪಣೆ ಮಾಡಿಕೊಂಡಿದ್ದಾರೆ. ಎರಡು ವೀರ ಸ್ವಹಾಬಿ ಶೂರರ ರೋಮಾಂಚಕ ಇತಿಹಾಸವನ್ನು ಒಳಗೊಂಡ ಈ ಕೃತಿ ಯನ್ನು ಓದಲು ಬಯಸುವವರಿಗೆ ದಾರಲ್ ಅಶ್ಃಅರಿಯ್ಯಾ ಸುರಿಬೈಲ್ ನಲ್ಲಿ ದೊರಕಲಿದೆ. ಇವರಿಂದ ಇನ್ನಷ್ಟು ಕೃತಿ ಸಾಹಿತ್ಯ ಲೋಕಕ್ಕೆ ದೊರಕುವಂ ತಾಗಲಿ ಎಂದು ಶುಭ ಹಾರೈಸಿ ದುಃಅ ಮೂಲಕ ಪ್ರಕಾಶನ ಗೈದರು.
ಈ ಸಂಧರ್ಭದಲ್ಲಿ ಅಬ್ದುರ್ರಶೀದ್ ಹನೀಫಿ ಕೆ ಸಿ ಎಫ್ ಸಂಸ್ಥಾಪಕ ಸದಸ್ಯ ಮಹ್ಮೂದ್ ಉಳ್ಳಾಲ್, ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ಕಾರ್ಯದರ್ಶಿ ಹಕೀಂ ನೆಕ್ಕರೆ ಹಾಗೂ ದಾರುಲ್ ಅಶ್ಃಅರಿಯ್ಯಾ ಇಮಾಮ್ ಸಿದ್ದೀಕ್ ಹನೀಫಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





