ಭಾರತದ ಫುಟ್ಬಾಲ್ ದಂತಕತೆಗಳಿಗೆ ಪ್ರಧಾನಿ ಮೋದಿ ಗೌರವ
ಹೊಸದಿಲ್ಲಿ, ಅ.6: ಆತಿಥೇಯ ಭಾರತ ತಂಡ ಅಮೆರಿಕ ವಿರುದ್ಧ ಫಿಫಾ ಅಂಡರ್-17 ವಿಶ್ವಕಪ್ ಪಂದ್ಯವನ್ನು ಆಡುವ ಮೊದಲು ಉಭಯ ತಂಡದ ಆಟಗಾರರನ್ನು ಸ್ವಾಗತಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತೀಯ ಫುಟ್ಬಾಲ್‌ನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಶುಕ್ರವಾರ ಘಾನಾ-ಕೊಲಂಬಿಯಾ ನಡುವಿನ ಮೊದಲ ಪಂದ್ಯ ಮುಗಿದ ಬಳಿಕ ಸ್ಟೇಡಿಯಂಗೆ ಆಗಮಿಸಿದ ಪ್ರಧಾನಿ ಮೋದಿ ವಿಐಪಿ ಡಯಸ್‌ನಿಂದ ನೇರವಾಗಿ ಮೈದಾನಕ್ಕೆ ತೆರಳಿ ಉಭಯ ತಂಡಗಳ ಆಟಗಾರರ ಕೈ ಕುಲುಕಿದರು. ಪ್ರಧಾನಿ ಮೋದಿ ಅವರು ಭಾರತದ ಫುಟ್ಬಾಲ್ ದಂತಕತೆಗಳಾದ ಪಿ.ಕೆ. ಬ್ಯಾನರ್ಜಿ, ಸೈಯದ್ ನಯೀಮುದ್ದೀನ್, ಐಎಂ ವಿಜಯನ್, ಬಾಚುಂಗ್ ಭುಟಿಯಾ, ಸುನೀಲ್ ಚೆಟ್ರಿ ಹಾಗೂ ಬೆಮ್‌ಬೆಮ್‌ದೇವಿಯವರನ್ನು ಗೌರವಿಸಿದರು. ಜೂನಿಯರ್ ವಿಶ್ವಕಪ್ ಆಯೋಜನೆಗೆ ವಿಶೇಷ ಆಸಕ್ತಿ ತೋರಿದ್ದ ಕೇಂದ್ರ ಸರಕಾರ 120 ಕೋ.ರೂ. ವ್ಯಯಿಸಿದೆ.
Next Story





