ಭಾರೀ ಮಳೆ: ಸಿಡಿಲು ಬಡಿದು ಹಾನಿ
ಪಡುಬಿದ್ರೆ, ಅ. 6: ಇಂದು ಸಂಜೆಯಿಂದ ಪಡುಬಿದ್ರಿ ಪರಿಸರದಲ್ಲಿ ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಪಡುಬಿದ್ರೆಯ ಕಾರ್ಕಳ ರಸ್ತೆಯ ಲಯನ್ಸ್ ಕ್ಲಬ್ ಶಾಲೆ ಬಳಿಯ ಜೀವನ್ ಚೌಟ ಅವರಿಗೆ ಸೇರಿದ ಪೆಟ್ರೋಲ್ ಪಂಪ್, ಹಾಗೂ ಯಂತ್ರೋಪಕರಣಗಳಿಗೆ ಹಾನಿಯಾಗಿರುವುದಾಗಿ ಮಾಲಕರು ಪತ್ರಿಕೆಗೆ ತಿಳಿಸಿದ್ದಾರೆ. ಇಂದು ಮಧ್ಯಾಹ್ನದಿಂದ ಈ ಪರಿಸರದಲ್ಲಿ ಕತ್ತಲಿಂದ ಕೂಡಿತ್ತು. ಸಂಜೆ ಬಳಿಕ ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಅಲ್ಲದೆ ಕಾಪು, ಎರ್ಮಾಳ್, ಉಚ್ಚಿಲದಲ್ಲೂ ಭಾರಿ ಮಳೆಯಾಗಿದೆ ಎಂದು ವರದಿಯಾಗಿದೆ.
Next Story





