ಅಪರಿಚಿತ ಯುವಕನ ಶವ ಪತ್ತೆ
ಬೆಂಗಳೂರು, ಅ.7: ಶೇಷಾದ್ರಿಪುರಂ ಠಾಣೆ ವ್ಯಾಪ್ತಿಯ ಪಿಎಫ್ ರಸ್ತೆಯ ಪಶ್ಚಿಮ ಭಾಗದಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದ್ದು, ಈತನ ಮುಖ ಗುರುತಿಸಲಾರದಷ್ಟು ಗಾಯಗಳಾಗಿವೆ. ವಾರಸುದಾರರು ಕೂಡಲೇ ಶೇಷಾದ್ರಿಪುರಂ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.
ಇದು ಕೊಲೆಯೋ ಅಥವಾ ಯಾವುದಾದರು ವಾಹನ ಈತನ ಮೇಲೆ ಹರಿದಿದೆಯೋ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸುಮಾರು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ಕಪ್ಪು ಕೂದಲು ಹೊಂದಿದ್ದು, ಕಪ್ಪು ಬಣ್ಣದ ಜೀನ್ಸ್‌ಪ್ಯಾಂಟು, ನೀಲಿ ಬಣ್ಣದ ತುಂಬುತೋಳಿನ ಶರ್ಟ್ ಧರಿಸಿದ್ದಾನೆ.
ಈ ಯುವಕನ ವಾರಸುದಾರರು ಕೂಡಲೇ ಶೇಷಾದ್ರಿಪುರಂ ಪೊಲೀಸ್ ಠಾಣೆ ಸಂಪರ್ಕಿಸಲು ಕೋರಲಾಗಿದೆ.
Next Story





