ಡಿಪಿಆರ್ ಇಲಾಖೆಯ ನಿರ್ಲಕ್ಷ್ಯಕ್ಕೆ ಖಂಡನೆ
ಬೆಂಗಳೂರು, ಅ.7: ರಾಜ್ಯದ ಮಾಜಿ ಮುಖ್ಯಮಂತ್ರಿಗಳಿಗೆ ಸಮಾನ ಗೌರವ ನೀಡಲು ನಿರ್ಲಕ್ಷಿಸುತ್ತಿರುವ ಡಿಪಿಆರ್ ಇಲಾಖೆಯ ಕ್ರಮವನ್ನು ನಾಡಪ್ರಭು ಕೆಂಪೇಗೌಡ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎ.ಎಚ್.ಬಸವರಾಜ್ ಖಂಡಿಸಿದ್ದಾರೆ.
ಕೆಂಪೇಗೌಡ ನಾಗರಿಕ ಹಿತರಕ್ಷಣಾ ವೇದಿಕೆಯು ಎ.14, 2016ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದು ರಾಜ್ಯದ ಎಲ್ಲ ದಿವಂಗತ ಮಾಜಿ ಮುಖ್ಯಮಂತ್ರಿಗಳಿಗೆ ಅವರ ಹುಟ್ಟಿದ ದಿನ ಮತ್ತು ನಿಧನರಾದ ದಿನದಂದು ಸರಕಾರದ ವತಿಯಿಂದಲೇ ಸಮಾನ ರೀತಿಯಲ್ಲಿ ಗೌರವ ಸಲ್ಲಿಸಬೇಕೆಂದು ಮನವಿ ಮಾಡಲಾಗಿತ್ತು.
ನಮ್ಮ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯದ ಡಿಪಿಆರ್ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿರುತ್ತಾರೆ. ಆದರೆ, ಒಂದೂವರೆ ವರ್ಷವಾದರೂ ಡಿಪಿಆರ್ ಇಲಾಖೆ ಈ ವಿಷಯ ಕುರಿತು ಯಾವುದೇ ಸೂಕ್ತ ನಿರ್ಧಾರ ಕೈಗೊಂಡಿಲ್ಲ ಎಂದು ಎ.ಎಚ್.ಬಸವರಾಜ್ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ.
Next Story





