ಸೋಲಾರ್ ಹಗರಣ: ಉಮ್ಮನ್ ಚಾಂಡಿ ಖುಲಾಸೆ

ಬೆಂಗಳೂರು, ಅ. 7: ಸೋಲಾರ್ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿಯಾಗಿದ್ದ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರನ್ನು ಸಾಕ್ಷಾಧಾರದ ಕೊರತೆಯಿಂದ ಇಲ್ಲಿನ ಕೋರ್ಟ್ ಶನಿವಾರ ಖುಲಾಸೆಗೊಳಿಸಿದೆ.
ಬೆಂಗಳೂರು ಮೂಲದ ಉದ್ಯಮಿ ಎಂ.ಕೆ. ಕುರುವಿಲ್ಲಾ ಅವರಿಗೆ 1.61 ಕೋಟಿ ರೂಪಾಯಿ ನೀಡುವಂತೆ ಚಾಂಡಿ ಹಾಗೂ ಒಂದು ಸಂಸ್ಥೆ ಸೇರಿದಂತೆ 6 ಪ್ರತಿವಾದಿಗಳಿಗೆ ಹೆಚ್ಚುವರಿ ನಗರ ನಾಗರಿಕ ಹಾಗೂ ಸೆಷನ್ಸ್ ನ್ಯಾಯಾಲಯ ಈ ಹಿಂದೆ ನಿರ್ದೇಶಿಸಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ಚಾಂಡಿ ಸಲ್ಲಿಸಿದ ಅರ್ಜಿಯನ್ನು ಹೆಚ್ಚುವರಿ ನಗರ ನಾಗರಿಕ ಹಾಗೂ ಸೆಷನ್ಸ್ ನ್ಯಾಯಾಲಯ ಪುರಸ್ಕರಿಸಿತು.
ಕುರುವಿಲ್ಲಾ ಅವರೊಂದಿಗೆ ಹಣ ವರ್ಗಾವಣೆ ಮಾಡಿರುವುದಕ್ಕೆ ಸಾಕ್ಷಾಧಾರದ ಕೊರತೆ ಇದೆ ಎಂಬ ಆಧಾರದಲ್ಲಿ ನ್ಯಾಯಮೂರ್ತಿ ಪಾಟಿಲ್ ಮೋಹನ್ ಕುಮಾರ್ ಭೀಮನಗೌಡ ಅವರು ಚಾಂಡಿ ಅವರನ್ನು ಖುಲಾಸೆಗೊಳಿಸಿದರು.
ಆದಾಗ್ಯೂ, ಉಳಿದ 5 ಮಂದಿ ಆರೋಪಿಗಳ ವಿರುದ್ದ ವಿಚಾರಣೆ ಮುಂದುವರಿಯಲಿದೆ ಎಂದು ನ್ಯಾಯಮೂರ್ತಿ ಹೇಳಿದರು.
Next Story





