ದೀರ್ಘ ವ್ಯಾಪ್ತಿಯ ಕ್ಷಿಪಣಿ ಹಾರಾಟಕ್ಕೆ ಉತ್ತರ ಕೊರಿಯ ಸಿದ್ಧತೆ: ರಶ್ಯ ಸಂಸದ

ಮಾಸ್ಕೊ, ಅ. 7: ದೀರ್ಘ ವ್ಯಾಪ್ತಿಯ ಕ್ಷಿಪಣಿಯೊಂದರ ಪರೀಕ್ಷಾ ಹಾರಾಟಕ್ಕೆ ಉತ್ತರ ಕೊರಿಯ ಸಿದ್ಧತೆ ನಡೆಸುತ್ತಿದೆ ಹಾಗೂ ಈ ಕ್ಷಿಪಣಿ ಅಮೆರಿಕದ ಪಶ್ಚಿಮ ಕರಾವಳಿಯನ್ನು ತಲುಪುತ್ತದೆ ಎಂದು ಅದು ಭಾವಿಸಿದೆ ಎಂದು ರಶ್ಯ ಸಂಸದರೊಬ್ಬರು ಹೇಳಿದ್ದಾರೆ.
ಉತ್ತರ ಕೊರಿಯದ ರಾಜಧಾನಿ ಪ್ಯಾಂಗ್‌ಯಾಂಗ್‌ಗೆ ಭೇಟಿ ನೀಡಿ ಹಿಂದಿರುಗಿರುವ ಆ್ಯಂಟನ್ ಮೊರೊರೊವ್ ಈ ಮಾತನ್ನು ಹೇಳಿದ್ದಾರೆ.
ಮೊರೊರೊವ್ ಮತ್ತು ಇತರ ಇಬ್ಬರು ರಶ್ಯ ಸಂಸದರು ಅಕ್ಟೋಬರ್ 2ರಿಂದ 6ರವರೆಗೆ ಪ್ಯಾಂಗ್‌ಯಾಂಗ್ ಪ್ರವಾಸದಲ್ಲಿದ್ದರು ಎಂದು ರಶ್ಯದ ಆರ್‌ಐಎ ಸುದ್ದಿ ಸಂಸ್ಥೆ ಹೇಳಿದೆ.
‘‘ದೀರ್ಘ ವ್ಯಾಪ್ತಿ ಕ್ಷಿಪಣಿಯ ನೂತನ ಪರೀಕ್ಷೆಗಳಿಗೆ ಅವರು ಸಿದ್ಧತೆ ನಡೆಸುತ್ತಿದ್ದಾರೆ. ತಮ್ಮ ಕ್ಷಿಪಣಿಯು ಅಮೆರಿಕದ ಪಶ್ಚಿಮ ಕರಾವಳಿಯನ್ನು ತಲುಪುತ್ತದೆ ಎನ್ನುವುದನ್ನು ತೋರಿಸುವ ಗಣಿತವನ್ನೂ ಅವರು ನಮಗೆ ತೋರಿಸಿದರು’’ ಎಂದು ರಶ್ಯ ಸಂಸದರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಹೇಳಿದೆ.
Next Story





