ಸೌದಿಗೆ 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ‘ತಾಡ್’ ಕ್ಷಿಪಣಿ ಮಾರಾಟ

ವಾಶಿಂಗ್ಟನ್, ಅ. 7: ಸೌದಿ ಅರೇಬಿಯಕ್ಕೆ ತಾಡ್ ಕ್ಷಿಪಣಿ ನಿಗ್ರಹ ರಕ್ಷಣಾ ವ್ಯವಸ್ಥೆಯನ್ನು 15 ಬಿಲಿಯ ಡಾಲರ್ (ಸುಮಾರು 1 ಲಕ್ಷ ಕೋಟಿ ರೂಪಾಯಿ) ಮೊತ್ತಕ್ಕೆ ಮಾರಾಟ ಮಾಡಲು ಅಮೆರಿಕ ವಿದೇಶಾಂಗ ಇಲಾಖೆ ಅನುಮೋದನೆ ನೀಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಶುಕ್ರವಾರ ಹೇಳಿದೆ.
ಈ ಅನುಮೋದನೆಯ ಹಿನ್ನೆಲೆಯಲ್ಲಿ, ಸೌದಿ ಅರೇಬಿಯವು 44 ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯ ಡಿಫೆನ್ಸ್ (ತಾಡ್) ಉಡಾವಕಗಳು, 360 ಕ್ಷಿಪಣಿಗಳು, ಅಗ್ನಿನಿಯಂತ್ರಕ ಸ್ಟೇಶನ್‌ಗಳು ಮತ್ತು ರಾಡರ್‌ಗಳನ್ನು ಖರೀದಿಸಬಹುದಾಗಿದೆ.
ಮಧ್ಯ ಪ್ರಾಚ್ಯದಲ್ಲಿ ಇರಾನ್‌ನ ‘ಆಕ್ರಮಣಕಾರಿ ವರ್ತನೆ’ಯನ್ನು ಸೌದಿ ಅರೇಬಿಯ ಮತ್ತು ಅಮೆರಿಕಗಳು ಕಟುವಾಗಿ ಖಂಡಿಸಿವೆ. ಇರಾನನ್ನು ಗುರಿಯಾಗಿಸಿ ಈ ಶಸ್ತ್ರ ವ್ಯಾಪಾರ ನಡೆದಿದೆ ಎಂದು ಹೇಳಲಾಗಿದೆ.
Next Story





