ಚಟುವಟಿಕೆಯಿಂದ ಆರೋಗ್ಯ ಸುಧಾರಣೆ ಸಾಧ್ಯ: ಸಚಿವ ಪ್ರಮೋದ್

ಉಡುಪಿ, ಅ.7: ಹಿರಿಯ ನಾಗರಿಕರು ವಿಶ್ರಾಂತ ಕಾಲದಲ್ಲೂ ಚಟುವಟಿಕೆ ಯಿಂದ ಇರುವ ಮೂಲಕ ಆರೋಗ್ಯ ಸುಧಾರಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯ ಮೀನುಗಾರಿಕೆ, ಯುವ ಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ವತಿಯಿಂದ ಶನಿವಾರ ಉಡುಪಿ ಬಡಗುಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾದ ಚಿಗುರೆಲೆ ಹಣ್ಣೆಲೆ ಸಂವಾದ ಕಾರ್ಯಕ್ರಮವನ್ನು ಉ್ಘಾಟಿಸಿ ಅವರು ಮಾತ ನಾಡುತಿದ್ದರು.
ಹಿರಿಯ ನಾಗರಿಕರು ಮನೆಯ ಒಳಗೆ ಸೀಮಿತವಾಗಿರದೆ ಸದಾ ಚಟುವಟಿಕೆ ಯಿಂದ ಇರಬೇಕು. ಅದಕ್ಕಾಗಿ ಸಂಘಟನೆಗಳೊಂದಿಗೆ ಸೇರಿಕೊಳ್ಳಬೇಕು. ಹಿರಿಯ ನಾಗರಿಕರಿಗೆ ಪ್ರೀತಿ, ಗೌರವ, ಮಾತನಾಡುವ ಸ್ವಾತಂತ್ರ ನೀಡುವ ಕೆಲಸವನ್ನು ಸಮಾಜ, ಕುಟುಂಬದವರು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ 80ವರ್ಷ ವಯಸ್ಸಿನ ಹಿರಿಯ ನಾಗರಿಕರಾದ ಎನ್. ಚಂದ್ರಶೇಖರ್ ಶೇಟ್, ಬಿ.ವಿ.ಆರ್.ಮಲ್ಯ, ಡಾ.ಗೋಪಾಲಕೃಷ್ಣ ಆಚಾರ್ಯ, ಅಮ್ಮುಂಜೆ ಮಂಜುನಾಥ ನಾಯಕ್, ವೈಕುಂಠ ನಾಯಕ್, ಬಿ.ರತ್ನಾಕರ್ ಕಾಮತ್, ಸುಂದರ್ ಗಿರಿಯ ಶೆಟ್ಟಿ, ಡಾ.ಕೆ.ಸೀತಾರಾಮ ಭಟ್ ಅವರನ್ನು ಸಚಿವರು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಬಡಗಬೆಟ್ಟು ಕೋಆಪರೇಟಿವ್ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ, ಹಿರಿಯ ನಾಗರಿಕರ ಸಂಸ್ಥೆಯ ಗೌರವಾಧ್ಯಕ್ಷ ಎ.ಪಿ.ಕೊಡಂಚ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಾರಿ ನಿರಂಜನ್ ಭಟ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ವಿವಿಧ ಬೇಡಿಕೆಗಳ ಮನವಿಯನ್ನು ಸಚಿವರಿಗೆ ಅರ್ಪಿಸಲಾಯಿತು. ಹಿರಿಯ ನಾಗರಿಕರ ಸಂಸ್ಥೆಯ ಉಪಾಧ್ಯಕ್ಷ ಎಚ್.ವಿ.ಹೆಗ್ಡೆ ಮನವಿ ವಾಚಿಸಿದರು. ಅಧ್ಯಕ್ಷ ಸಿ.ಎಸ್. ರಾವ್ ಸ್ವಾಗತಿಸಿದರು. ಜತೆಕಾರ್ಯದರ್ಶಿ ಎ.ಎಸ್.ದೇವರಾಜ್ ವಂದಿಸಿದರು. ಕಾರ್ಯದರ್ಶಿ ವೈ. ಭುವನೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.







