ಅ.8 ರಂದು ಕಾನೂನು ಅರಿವು ಕಾರ್ಯಗಾರ
ಚಿಕ್ಕಮಗಳೂರು, ಅ.7: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಬಕಾರಿ ಇಲಾಖೆ, ವಾರ್ತಾ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರವನ್ನು ಅ.8 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ನ್ಯಾಯಾಲಯದ ಸಮುಚ್ಛಯದಲ್ಲಿನ ಪರ್ಯಾಯ ವಾಜ್ಯಗಳ ಪರಿಹಾರ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿ.ಕಾ.ಸೇ.ಪ್ರಾ. ದ ಅಧ್ಯಕ್ಷೆ ಪ್ರಭಾವತಿ ಎಂ. ಹಿರೇಮಠ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಜಿ. ಸತ್ಯವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಸ್ಪಿ ಕೆ.ಅಣ್ಣಾಮಲೈ, ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಸೋಮಶೇಖರಪ್ಪ, ಅಬಕಾರಿ ಇಲಾಖೆ ಉಪ ಆಯುಕ್ತ ಮೋಸೆಸ್ ಸ್ಯಾಮುಯಲ್, ನಿವೃತ್ತ ಸರ್ಕಾರಿ ಅಭಿಯೋಜಕ ವಿ.ಜಿ. ಬಂಡಿ, ಸಿ.ಐ.ಡಿ, ಕಾಲ್ರ್ಸ್‍ಟೌನ್ ಮತ್ತು ಸರ್ಕಾರಿ ಅಭಿಯೋಜಕ ವಿ.ಎಸ್ ಭಟ್, ಸರ್ಕಾರಿ ಅಭಿಯೋಜಕ ಆನಂದ್ ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಟಿ. ದುಶ್ಯಂತ್ ಮತ್ತಿತರರು ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.





