ಹಿಮಾಚಲ ಪ್ರದೇಶ: ವೀರಭದ್ರ ಸಿಂಗ್ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ; ರಾಹುಲ್ ಗಾಂಧಿ

ಮಂಡಿ, ಅ. 7: ಹಿಮಾಚಲ ಪ್ರದೇಶದಲ್ಲಿ ಪಕ್ಷದ ಮುಖ್ಯಮಂತ್ರಿ ಬಗೆಗಿನ ಊಹಾಪೋಹಕ್ಕೆ ತೆರೆ ಎಳೆದಿರುವ ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ, ವೀರಭದ್ರ ಸಿಂಗ್ 7ನೇ ಬಾರಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಅಕ್ರಮ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಹಾಗೂ ಜಾಮೀನನ ಮೇಲೆ ಬಿಡುಗಡೆಗೊಂಡಿರುವ ವೀರಭದ್ರ ಸಿಂಗ್ ಬಗೆಗಿನ ಪಕ್ಷದ ನಿಲುವಿನ ಬಗ್ಗೆ ಸ್ಪಷ್ಟ ಸೂಚನೆ ನೀಡಿದ ರಾಹುಲ್ ಗಾಂಧಿ, 6 ಬಾರಿ ಮುಖ್ಯಮಂತ್ರಿ ಆಗಿರುವ ವೀರಭದ್ರ ಸಿಂಗ್ ಅದ್ಭುತ ಅಭಿವೃದ್ಧಿ ಸಾಧಿಸಿದ್ದಾರೆ. 7ನೇ ಬಾರಿ ಕೂಡ ಅವರು ಮುಖ್ಯಮಂತ್ರಿಯಾಗಲಿದ್ದಾರೆ. ಪಕ್ಷ ಅವರನ್ನು ಬೆಂಬಲಿಸಲಿದೆ ಎಂದರು.
Next Story





