ಅ. 9ರಿಂದ ಟ್ರಕ್ ಮುಷ್ಕರ

ಕೋಲ್ಕತಾ, ಅ. 7: ಜಿಎಸ್‌ಟಿಯ ವಿನಾಶಕಾರಿ ನೀತಿ ವಿರುದ್ಧ ಹಾಗೂ ನೂತನ ಪರೋಕ್ಷ ತೆರಿಗೆಯ ವ್ಯಾಪ್ತಿಯಲ್ಲಿ ಡೀಸೆಲ್ ಅನ್ನು ಒಳಗೊಳಿಸುವುದಕ್ಕೆ ಆಗ್ರಹಿಸಿ ಟ್ರಕ್ ಮಾಲಕರು ಹಾಗೂ ನಿರ್ವಾಹಕರು ಅಕ್ಟೋಬರ್ 9ರಂದು ಬೆಳಗ್ಗೆ 8 ಗಂಟೆಯಿಂದ 36 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಜಿಎಸ್‌ಟಿ ಅನುಷ್ಠಾನಗೊಳಿಸಿದ ಬಳಿಕ ಸರಕು ಸಾಗಾಟ ವ್ಯವಸ್ಥೆ ಗಂಭೀರವಾಗಿ ತೊಂದರೆಗೀಡಾಗಿದೆ. ಈ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಮೋಟರ್ ಕಾಂಗ್ರೆಸ್ ಹಾಗೂ ಇತರ ಸಾಗಾಟ ಸಂಘಟನೆಗಳು ಅಕ್ಟೋಬರ್ 9ರಂದು ಬೆಳಗ್ಗೆ 8 ಗಂಟೆಯಿಂದ ಅಕ್ಟೋಬರ್ 10ರಂದು ರಾತ್ರಿ 8 ಗಂಟೆ ವರೆಗೆ ಎರಡು ದಿನಗಳ ಆರಂಭಿಕ ರಾಷ್ಟ್ರವ್ಯಾಪಿ ಮುಷ್ಕರ ಘೋಷಿಸಿದೆ ಎಂದರು.
ನಾವು ಕೂಡ ಇದಕ್ಕೆ ಬೆಂಬಲ ನೀಡುತ್ತೇವೆ ಎಂದು ಕೋಲ್ಕತ್ತಾ ಗೂಡ್ಸ್ ಆ್ಯಂಡ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಶನ್‌ನ ಅಧ್ಯಕ್ಷ ಪ್ರಭಾತ್ ಕುಮಾರ್ ಮಿತ್ತಲ್ ತಿಳಿಸಿದ್ದಾರೆ.
Next Story





