ಭಾರತ ಜೊತೆಗಿನ ಬಾಂಧವ್ಯ ಉಭಯ ಹಿತಾಸಕ್ತಿಗಳಿಗೆ ಪೂರಕ: ಚೀನಾ

ಬೀಜಿಂಗ್, ಅ. 7: ಭಾರತದೊಂದಿಗಿನ ಆರೋಗ್ಯಕರ ಮತ್ತು ಸ್ಥಿರ ಸಂಬಂಧ ಉಭಯ ದೇಶಗಳ ನಡುವಿನ ಮೂಲ ಹಿತಾಸಕ್ತಿಗಳಿಗೆ ಪೂರಕವಾಗಿರುತ್ತದೆ ಎಂದು ಚೀನಾ ಇಂದು ಅಭಿಪ್ರಾಯಪಟ್ಟಿದೆ.
ಎರಡು ದೇಶಗಳ ವಿರುದ್ಧದ ಯುದ್ಧದ ಬಗ್ಗೆ ಭಾರತೀಯ ವಾಯುಪಡೆ ಮುಖ್ಯಸ್ಥರು ಇತ್ತೀಚೆಗೆ ನೀಡಿರುವ ಹೇಳಿಕೆಗೆ ಚೀನಾ ಈ ಪ್ರತಿಕ್ರಿಯೆ ನೀಡಿದೆ.
ಚೀನಾ ಮತ್ತು ಭಾರತ ಪರಸ್ಪರರ ಮಹತ್ವದ ನೆರೆಕರೆಗಳಾಗಿವೆ ಹಾಗೂ ಅವುಗಳು ಅತಿ ದೊಡ್ಡ ಅಭಿವೃದ್ಧಿಶೀಲ ದೇಶಗಳು ಮತ್ತು ಉದಯೋನ್ಮುಖ ಮಾರುಕಟ್ಟೆಗಳಾಗಿವೆ ಎಂದು ಚೀನಾದ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story





