ಕ್ಷೇತ್ರದಲ್ಲಿ ನಡೆಯುತ್ತಿರುವ ಪಕ್ಷದ ನೈಜ ಸ್ಥಿತಿಗಳ ಬಗ್ಗೆ ಯಡ್ಡಿಯೂರಪ್ಪರವರ ಗಮನಕ್ಕೆ ತರಲಾಗುವುದು: ರಾಜೇಂದ್ರಕುಮಾರ್

ಹನೂರು, ಅ.7: ಹನೂರು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪಕ್ಷದಲ್ಲಿ ಇತ್ತೀಚಿನ ಪಕ್ಷದ ಆಂತರಿಕ ಬಣಗಳ ಗುಂಪುಗಾರಿಕೆಯ ಬೆಳವಣಿಗೆಗಳು ಮುಂದುವರಿದರೆ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಕ್ಷೇತ್ರದಲ್ಲಿ ಮತ್ತೆ ಮುಗ್ಗುರಿಸುವುದು ತಪ್ಪಿದ್ದಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ ರಾಜೇಂದ್ರಕುಮಾರ್ ಬಳಿ ಬಿಜೆಪಿ ಕಾರ್ಯಕರ್ತರು ಕಂಬನಿ ಮಿಡಿಯುವ ಮೂಲಕ ಕ್ಷೇತ್ರದ ಬಿಜೆಪಿಯ ನೈಜ ಸಂಗತಿ ಬಗ್ಗೆ ತಿಳಿಸಿದರು.
ಈ ವೇಳೆ ಕ್ಷೇತ್ರ ವ್ಯಾಪ್ತಿಯ ಬಂಡಳ್ಳಿ ,ಚಿಂಚಳ್ಳಿ, ನಾಗನತ್ತ ಬೈರನಾಥ ಗ್ರಾಮಗಳಿಗೆ ಭೇಟಿ ನೀಡಿ ಬಳಿಕ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡಿ, ಬಿಜೆಪಿ ಚಿಹ್ನೆಯಾದ ಕಮಲದ ಗುರುತನ್ನು ನೋಡಿ ಅಭ್ಯರ್ಥಿಯ ಯಾರೆಂಬುದನ್ನು ತೆಲೆಕೆಡಿಸಿಕೂಳ್ಳದೇ ಪಕ್ಷದ ಸಂಘಟನೆಯಲ್ಲಿ ತೊಡಗಿಸಿದ ಅಭ್ಯರ್ಥಿಯ ಹೆಸರನ್ನು ಆಯ್ಕೆ ಮಾಡಿ, ಅಂತಿಮ ತೀರ್ಮಾನವನ್ನು ವರಿಷ್ಠರು ವಿಸ್ತರಕರು ಹಾಗೂ ಚುನಾವಣೆ ಉಸ್ತುವಾರಿಗಳ ಹಾಗೂ ಜಿಲ್ಲಾಧ್ಯಕ್ಷರ ಮತದಾರರ ಅಭಿಪ್ರಾಯ ಸಂಗ್ರಹಿಸಿ ಟಿಕೇಟ್ ನೀಡಲಿದ್ದಾರೆ ಎಂದು ಹೇಳಿದರು.
ಕಾರ್ಯಕರ್ತರನ್ನು ಆದಷ್ಟು ಬೇಗ ಬಿ.ಎಸ್ .ಯಡ್ಡಿಯೂರಪ್ಪರವರ ಬಳಿ ಕರೆದುಕೂಂಡು ಹೋಗಿ ಹನೂರು ಕ್ಷೇತ್ರದಲ್ಲಿ ಆಗುತ್ತಿರುವ ಪಕ್ಷದ ನೈಜ ಸ್ಥಿತಿಗಳನ್ನು ಅವರಿಗೆ ತಿಳಿಸಿ ಎಲ್ಲಾ ಸಮಸ್ಯಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮೋರ್ಚಾ ಮುಖಂಡರಾದ ಸಿ.ಎಸ್. ಮಹದೇವಪ್ಪ ಬಸವಣ್ಣ, ಪ್ರಬು ಸ್ವಾಮಿ, ಮಣಗಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಲ್ಲೇಶ್, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಂಡಳ್ಳಿ ಶಂಕರಪ್ಪ, ಜಿಲ್ಲಾ ಎಸಿ ಮೊರ್ಚಾ ಉಪಾಧ್ಯಕ್ಷ ಪುಟ್ಟಸ್ವಾಮಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಮಾತೃಭೂಮಿಮೂರ್ತಿ, ನಾಗೇಂದ್ರ, ರಂಗಧಾಮಚಾರಿ, ಪಿ.ಮೂರ್ತಿ, ಮಾರಪ್ಪ ನಾಯಕ, ಗ್ರಾಮ ಪಂಚಾಯತ್ ಸದಸ್ಯರಾದ ಶಿವಲಿಂಗಸ್ವಾಮಿ, ಮುಖಂಡರಾದ ಮಹದೇವಪ್ಪ , ಪನ್ನಾಡಿನಾಯಕ್, ಪುರು ಷೋತ್ತಮ್, ಮಲ್ಲಯ್ಯ, ಅರುಣೇಶ್, ಎಲ್. ಲಿಂಗರಾಜು ಹಾಗೂ ಸಿ.ಎಂ ರಾಜೇಂದ್ರಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಚಿನ್ ದಿಕ್ಷೀತ್ , ಶಂಬು ಸಿದ್ದಪ್ಪಾಜಿ, ಸಂತೋಷ್ ಇನ್ನಿತರರು ಹಾಜರಿದ್ದರು.







