ಉಳ್ಳಾಲ ಎಸ್ಸೆಸ್ಸೆಫ್‌ನಿಂದ ಚಿನ್ನಾಭರಣ ವಿತರಣೆ

ಮಂಗಳೂರು, ಅ.7: ಶ್ರೀಮಂತರು ಬಡವರನ್ನು ಗುರುತಿಸಿ ಸಹಾಯ ಮಾಡಲಿ ಎಂದು ಕರೆ ನೀಡುವ ಇಸ್ಲಾಂ ಧರ್ಮ ಭಿಕ್ಷಾಟನೆಗೆ ಎಂದಿಗೂ ಪ್ರೋತ್ಸಾಹ ನೀಡುವುದಿಲ್ಲ ಎಂದು ಮಲ್‌ಜಅಹ್ ಸಂಸ್ಥೆಯ ಅಸೈಯದ್ ಜಲಾಲುದ್ದೀನ್ ಅಲ್-ಹಾದಿ ಉಜಿರೆ ತಂಙಳ್ ಹೇಳಿದ್ದಾರೆ.
ಕುಂಪಲದ ಎಮ್.ಆರ್ ಪ್ಯಾಲೇಸ್‌ನಲ್ಲಿ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ವತಿಯಿಂದ ಶುಕ್ರವಾರ ನಡೆದ ಹೆಣ್ಣಿನ ಮದುವೆಗೆ ಚಿನ್ನ ವಿತರಣೆ ಮತ್ತು ಪ್ರಾರ್ಥನಾ ಸಂಗಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಇಸ್ಲಾಮಿನ ನಿಯಮ ಪ್ರಕಾರ ಶ್ರೀಮಂತರು ತನ್ನ ಆಸ್ತಿಯ ಶೇ.2ನ್ನು ಅರ್ಹರಿಗೆ ನೀಡಬೇಕು. ಅದರೆ ಇಂದು ಬಡವರು ಶ್ರೀಮಂತರನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ. ಇದು ಸರಿಯಲ್ಲ. ಈ ನಿಟ್ಟಿನಲ್ಲಿ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್‌ನ ಸೇವೆಯು ಶ್ಲಾಘನೀಯ ಎಂದರು.
ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ. ಸಿರಾಜುದ್ದೀನ್ ಸಖಾಫಿ ಕನ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಸಂಘಟನೆ 2 ವರ್ಷಗಳಲ್ಲಿ 40 ಲಕ್ಷ ರೂ.ವನ್ನು ಅರ್ಹರಿಗೆ ನೀಡುವ ಮೂಲಕ ಮಾದರಿಯಾಗಿದೆ ಎಂದರು.
ಉದ್ಯಮಿ ಅಬ್ಬಾಸ್ ಹಾಜಿ ಕೋಟೆಪುರ ಅರ್ಹ ಹೆಣ್ಣಿನ ಮದುವೆಗೆ ಚಿನ್ನ ವಿತರಿಸಿದರು. ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಇಕ್ಬಾಲ್ ಹಾಜಿ ಕುಂಪಲ, ಉಳ್ಳಾಲ ನಗರ ಸಭೆ ಸದಸ್ಯ ಅಶ್ರಫ್ ಬಾವ ಕೋಡಿ, ಮುಹಮ್ಮದ್ ಕುಂಪಲ, ಎಸ್‌ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಜಲಾಲುದ್ದೀನ್ ತಂಙಳ್, ಎಸ್‌ವೈಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷ ಬಶೀರ್ ಅಹ್ಸನಿ ತೋಡಾರ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಲಿಕೆ, ತೊಕ್ಕೊಟ್ಟು ಸೆಕ್ಟರ್ ಉಪಾಧ್ಯಕ್ಷ ಶಮೀರ್ ಸೇವಂತಿಗುಡ್ಡೆ, ಪ್ರಧಾನ ಕಾರ್ಯದರ್ಶಿ ಮುಹಮ್ಮಿಲ್ ಕೋಡಿ, ಎಸ್ಸೆಸ್ಸೆಫ್ ಮಂಗಳೂರು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನಿಝಾಮ್, ಉದ್ಯಮಿ ಉಮರಬ್ಬ ತೊಕ್ಕೊಟ್ಟು, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಕೋಶಾಧಿಕಾರಿ ಶಮೀರ್ ಹಿದಾಯತ್ ನಗರ, ಹೈಸ್ಕೂಲ್ ಕನ್ವೀನರ್ ಬಿ.ಎಸ್ ಇಸ್ಮಾಯೀಲ್ ಕುತ್ತಾರು, ಕಾರ್ಯದರ್ಶಿ ಮನ್ಸೂರ್ ದಾರಂದಬಾಗಿಲು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಜಾಫರ್ ಯು.ಎಸ್ ಸ್ವಾಗತಿಸಿದರು. ಕ್ಯಾಂಪಸ್ ಕಾರ್ಯದರ್ಶಿ ಬಾತಿಷ್ ಮಂಚಿಲ ವಂದಿಸಿದರು. ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಅಧ್ಯಕ್ಷ ಅಲ್ತಾಫ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.







