ಬಂಟ್ವಾಳದ ವಿವಿಧ ಕಡೆ 'ನಮಗೂ ಹೇಳಲಿಕ್ಕಿದೆ' ಪಿಎಪ್ಐ ಅಭಿಯಾನದ ಪ್ರಚಾರಾರ್ಥ

ಫರಂಗಿಪೇಟೆ, ಅ. 7: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶದ ವಿವಿಧ ರಾಜ್ಯಗಳಲ್ಲಿ ನಡೆಸಲು ಉದ್ದೇಶಿಸಿದ 'ನಮಗೂ ಹೇಳಲಿಕ್ಕಿದೆ' ಎಂಬ ಬೃಹತ್ ಸಮಾವೇಶದ ಅಂಗವಾಗಿ ಕರ್ನಾಟಕ ರಾಜ್ಯದಲ್ಲಿ ಅ. 15 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು ಇದರ ಪ್ರಚಾರಾರ್ಥಕವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ವತಿಯಿಂದ ಬಿಸಿರೋಡಿನ ಅಲ್ ಕಝಾನ ಹಾಲ್ ನಲ್ಲಿ, ಅಕ್ಕರಂಗಡಿ ಮಾಹಿತಿ ಕೇಂದ್ರ ಕಚೇರಿಯಲ್ಲಿ, ಕಲ್ಲಡ್ಕ ಮತ್ತು ವಿಟ್ಲದಲ್ಲಿ ಸ್ನೇಹ ಸಮ್ಮಿಲನ ಹಾಗೂ ತಾಲೂಕಿನ ವಿವಿಧ ಕಡೆ ಕಾರ್ನರ್ ಮೀಟ್ ನಡೆಯಿತು.
ಭಾರತದ ಸ್ವಾತಂತ್ರ್ಯಕ್ಕಾಗಿ ಜೀವ ಹಾಗೂ ಜೀವನವನ್ನು ಬಲಿದಾನಗೈದವರಲ್ಲಿ ಮುಸ್ಲಿಮರ ಪಾತ್ರ ಬಹಳಷ್ಟಿದೆ ಆದರೂ ಇಂದು ಮುಸ್ಲಿಮರು ದೇಶ ಪ್ರೇಮದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದರ ಹಿಂದೆ ಬಿಜೆಪಿ ಮತ್ತು ಸಂಘಪರಿವಾರದ ವ್ಯವಸ್ಥಿತವಾದ ಷಡ್ಯಂತ್ರ ಅಡಗಿದೆ, ಸರ್ವರಿಗೂ ಸಮಾನ ನ್ಯಾಯ, ಹಕ್ಕುಗಳನ್ನು ದೇಶದ ಸಂವಿದಾನ ನೀಡಿದ್ದರೂ ಅದರ ಫಲಾನುಭವಿಗಳು ಮತ್ತು ಅನುಷ್ಟಾನ ಮಾತ್ರ ಸೀಮಿತ ವರ್ಗಕ್ಕೆ ಅನ್ವಯಿಸುವಂತಾಗಿದೆ, ದೇಶದ ಅಲ್ಪಸಂಖ್ಯಾತರು ಆಡಳಿತ ವರ್ಗ ನಡೆಸುವ ದಮನಕಾರಿ ನೀತಿಯಿಂದ ನಲುಗಿ ಹೋಗಿವೆ ಇದನ್ನು ಸಂವಿದಾನಾತ್ಮಕವಾಗಿ ಪಾಪ್ಯುಲರ್ ಫ್ರಂಟ್ ಪ್ರಶ್ನಿಸುತ್ತಾ ಬಂದಿದೆ, ಮಾತ್ರವಲ್ಲದೆ ದ್ವನಿ ಇಲ್ಲದ ಸಮುದಾಯಕ್ಕೆ ಪ್ರಶ್ನಿಸುವ ಸ್ಥೈರ್ಯ ನೀಡಿ ದೇಶದಾದ್ಯಂತ ವಿಸ್ತರಿಸಿದ ಈ ಚಳುವಳಿಯನ್ನು ಹತ್ತಿಕ್ಕಲು ಕೇಂದ್ರ ಸರಕಾರ ತನಿಕಾ ಸಂಸ್ಥೆಯನ್ನು ದುರುಪಯೋಗ ನಡೆಸಿ ಪಾಪ್ಯುಲರ್ ಪ್ರಂಟನ್ನು ನಿಗ್ರಹಿಸಲು ಹೊರಟಿದೆ.
ದೇಶದಲ್ಲಿ ಸಾವಿರಾರು ಕೋಮುಗಳಭೆ ನಡೆಸಿ ಅನೇಕ ಹತ್ಯಾಕಾಂಡ ನಡೆಸಿದ ಪ್ರಜಾಪ್ರಭುತ್ವ ವಿರೋಧಿ ಸಂಘಪರಿವಾರವನ್ನು ನಿಗ್ರಹಿಸುವುದರ ಬದಲು ಪಾಪ್ಯುಲರ್ ಫ್ರಂಟ್ ನ್ನು ನಿಗ್ರಹಿಸಲಿಕ್ಕೆ ಹೊರಟಿರುವುದು ಯಾವ ನ್ಯಾಯ, ಗಾಂಧಿ ಹತ್ಯೆಯಿಂದ ಗೌರಿ ಲಂಕೇಶ್ ಹತ್ಯೆಯವರೆಗೂ, ಈ ದೇಶದಲ್ಲಿ ನಡೆದ ಆಕ್ರಮಣ ಮತ್ತು ತಾರತಮ್ಯದ ವನ್ನು ಇಡೀ ದೇಶಕ್ಕೆ ಹೇಳುವಂತಹ ಅಭಿಯಾನವಾಗಿದೆ 'ನಮಗೂ ಹೇಳಲ್ಲಿಕ್ಕಿದೆ' ಎಂದು ಎಸ್. ಡಿ. ಪಿ.ಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅಭಿಯಾನದ ಪ್ರಚಾರಾರ್ಥಕವಾಗಿ ಬಂಟ್ವಾಳ ತಾಲೂಕಿನ ವಿವಿಧ ಕಡೆ ನಡೆದ ಸ್ನೇಹ ಸಮ್ಮಿಲನ ಕೂಟದಲ್ಲಿ ಮಾತನಾಡಿದರು.
ಪಿ ಎಫ್ ಐ ಬಂಟ್ವಾಳ ತಾಲೂಕ್ ಅಧ್ಯಕ್ಷ ಇಜಾಝ್, ಕಾರ್ಯದರ್ಶಿ ಸಲೀಮ್, ಸಮಿತಿ ಸದಸ್ಯರಾದ ಅಬೂಬಕರ್ ಸಿದ್ದೀಕ್, ಇಮ್ತಿಯಾಝ್ ತುಂಬೆ ಈ ಸಂದರ್ಭ ಮಾತನಾಡಿದರು.







