ಬಟ್ಟಲು
![ಬಟ್ಟಲು ಬಟ್ಟಲು](https://www.varthabharati.in/sites/default/files/images/articles/2017/10/8/zlkkkhd.gif)
ಶಿಷ್ಯನೊಬ್ಬ ಹಗಲು ರಾತ್ರಿ ದೇವರು, ಧರ್ಮದ ಬಗ್ಗೆ ಎಲ್ಲರ ಜೊತೆಗೆ ಚರ್ಚಿಸುತ್ತಿದ್ದ.
ಸಂತನಿಗೋ ಶಿಷ್ಯನ ಚರ್ಚೆ ಕೇಳಿ ಕೇಳಿ ಸಾಕಾಯಿತು.
ಒಂದು ದಿನ ಶಿಷ್ಯನನ್ನು ಕರೆದು ಹೇಳಿದ ‘‘ನೋಡು, ಬಟ್ಟಲನ್ನು ತೊಳೆಯುವುದು ಸ್ವಚ್ಛತೆಯೇನೋ ಹೌದು. ಆದರೆ ಒಂದೇ ಬಟ್ಟಲನ್ನು ಇಡೀ ದಿನ ತೊಳೆಯುತ್ತಾ ಇರೋದು ರೋಗ...’’
ಅಷ್ಟೇ ಅಂದಿನಿಂದ ದೇವರು, ಧರ್ಮದ ಕುರಿತಂತೆ ದಿನವಿಡೀ ಚರ್ಚಿಸುವುದನ್ನು ನಿಲ್ಲಿಸಿ ಬಿಟ್ಟ.
Next Story