ಅಂತ್ಯೋದಯ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ಚಾಲನೆ

ಹೊಸದಿಲ್ಲಿ, ಅ.8: ಗುಜರಾತ್ ಭೇಟಿಯ ಕೊನೆಯ ದಿನವಾದ ರವಿವಾರ ತನ್ನ ಹುಟ್ಟೂರು ವಾಡ್ನಗರ್ ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅಂತ್ಯೋದಯ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದರು.
ಅಂತ್ಯೋದಯ ಎಕ್ಸ್ ಪ್ರೆಸ್ ರೈಲ್ವೆ ಇಲಾಖೆಯ ಪ್ರಶಂಸಾರ್ಹ ಸಾಧನೆಯಾಗಿದೆ. ಇದು ಪ್ರಮುಖವಾಗಿ ಉತ್ತರ ಪ್ರದೇಶ ಹಾಗು ಬಿಹಾರದ ಜನತೆಗೆ ನೆರವಾಗಲಿದೆ ಎಂದವರು ಈ ಸಂದರ್ಭ ಹೇಳಿದರು.
ಭಾರುಚ್ ನಿಂದ ವಿಡಿಯೋ ಲಿಂಕ್ ಮೂಲಕ ಅಂತ್ಯೋದಯ ಎಕ್ಸ್ ಪ್ರೆಸ್ ಗೆ ಚಾಲನೆ ನೀಡಲಾಯಿತು. ಸೂರತ್ ನ ಉಧ್ನಾದಿಂದ ಆರಂಭವಾಗುವ ಈ ರೈಲು ಬಿಹಾರದ ಜಯನಗರದವರೆಗೆ ಕ್ರಮಿಸಲಿದೆ.
ಈ ಸಂದರ್ಭ ಪ್ರಧಾನಿ ನರ್ಮದಾ ನದಿ ಅಣೆಕಟ್ಟಿಗೆ ಶಿಲಾನ್ಯಾಸವನ್ನೂ ನೆರವೇರಿಸಿದರು.
Next Story





