ನ್ಯೂಜರ್ಸಿ: ಪತ್ನಿಯನ್ನು ಕೊಂದ ಭಾರತೀಯನಿಗೆ 20 ವರ್ಷ ಜೈಲು

ನ್ಯೂಯಾರ್ಕ್, ಅ. 8: ತನ್ನ ಹೆಂಡತಿಯನ್ನು 40 ಬಾರಿ ಇರಿದು ಕೊಂದ 48 ವರ್ಷದ ಭಾರತ ಮೂಲದ ವ್ಯಕ್ತಿಯೊಬ್ಬನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ನ್ಯೂಜರ್ಸಿಯ ಸ್ಯಾಲಮ್‌ನ ಸುಪೀರಿಯರ್ ಕೋರ್ಟ್ ನ್ಯಾಯಾಧೀಶೆ ಲಿಂಡಾ ಲಾಹನ್ ಶುಕ್ರವಾರ ಈ ತೀರ್ಪನ್ನು ನೀಡಿದರು.
ಅಪರಾಧಿ ನಿತಿನ್ ಪಿ. ಸಿಂಗ್ 2016ರ ಜುಲೈ ತಿಂಗಳಲ್ಲಿ ತನ್ನ 42 ವರ್ಷದ ಹೆಂಡತಿ ಸೀಮಾ ಸಿಂಗ್‌ರನ್ನು ಅವರು ವಾಸಿಸುತ್ತಿರುವ ಅಪಾರ್ಟ್‌ಮೆಂಟ್‌ನಲ್ಲಿ ಇರಿದು ಕೊಂದಿದ್ದನು. ಆಗ ಅವರ ಪಕ್ಕದಲ್ಲಿ ಅವರ ಮೂವರು ಮಕ್ಕಳು ನಿದ್ರಿಸುತ್ತಿದ್ದರು. ಮಕ್ಕಳಿಗೆ ಗಾಯವಾಗಿಲ್ಲ. ಸೀಮಾ ಕಾಲಿನ್ಸ್‌ವುಡ್‌ನಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದರು.
‘‘ನನಗೆ ಬೇರೆ ಸಂಬಂಧವಿದೆ. ನಾನು ನಿಮ್ಮಿಂದ ದೂರ ಹೋಗುತ್ತೇನೆ. ನಿಮ್ಮ ಎಲ್ಲ ಹಣ ಮತ್ತು ನಮ್ಮ ಮಕ್ಕಳನ್ನು ನನ್ನೊಂದಿಗೆ ಕರೆದುಕೊಂಡು ಹೋಗುತ್ತೇನೆ ಎಂಬುದಾಗಿ ನನ್ನ ಹೆಂಡತಿ ಹೇಳಿದಾಗ ನಾನು ಆಕ್ರೋಶದಿಂದ ಆಕೆಯನ್ನು ಕೊಂದೆ’’ ಎಂಬುದಾಗಿ ನಿತಿನ್ ಪಿ. ಸಿಂಗ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾನೆ.
Next Story





