ಉಪ್ಪಿನಂಗಡಿಯಲ್ಲಿ ರಾಜ್ಯ ಉಲಮಾ ಸಂಗಮಕ್ಕೆ ಚಾಲನೆ

ಉಪ್ಪಿನಂಗಡಿ, ಅ. 8: ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಆಶ್ರಯದಲ್ಲಿ ಮೂರು ದಿನಗಳ ಕಾಲ ಉಪ್ಪಿನಂಗಡಿ ತಾಜುಲ್ ಉಲಮಾ ವೆದಿಕೆಯಲ್ಲಿ ನಡೆಯುವ ಬೃಹತ್ ಉಲಮಾ ಸಂಗಮದ ಅಧಿಕೃತ ಚಾಲನಾ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಉಪ್ಪಿನಂಗಡಿಯಲ್ಲಿ ಇಂದು ಧ್ವಜಾರೋಹಣ ಮಾಡಿ ಚಾಲನೆ ನೀಡಿದರು.
ಅ.9 ಮತ್ತು 10ರಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸುಮಾರು ಎರಡು ಸಾವಿರಕ್ಕೂ ಅಧಿಕ ನೋಂದಾಯಿತ ಧಾರ್ಮಿಕ ವಿದ್ವಾಂಸರಿಗೆ ವಿವಿಧ ವಿಷಯಗಳ ಕುರಿತು ಗೋಷ್ಠಿ ಹಾಗೂ ತರಬೇತಿ ನೀಡುವ ಸದರಿ ಉಲಮಾ ಸಮ್ಮೇಳನದಲ್ಲಿ ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ, ಜಂಇಯ್ಯತುಲ್ ಉಲಮಾ ಕರ್ನಾಟಕ ರಾಜ್ಯಾಧ್ಯಕ್ಷ ಶೈಖುನಾ ಬೇಕಲ್ ಉಸ್ತಾದ್ ಸಮಸ್ತ ಕಾರ್ಯದರ್ಶಿ ಮುಹ್ಯಿಸ್ಸುನ್ನ ಪೊನ್ಮಳ ಉಸ್ತಾದ್, ಎಸ್.ವೈ.ಎಸ್. ಕೇರಳ ರಾಜ್ಯಾಧ್ಯಕ್ಷ ಪೇರೋಡ್ ಉಸ್ತಾದ್ ,ಕರ್ನಾಟಕ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ.ಹಂಝ ಸಖಾಫಿ ಮುಂತಾದವರು ಸಂಪನ್ಮೂಲ ವ್ಯಕ್ತಿ ಗಳಾಗಿ ಭಾಗವಹಿಸುವರು.
ಜಂಇಯ್ಯತುಲ್ ಉಲಮಾ ರಾಜ್ಯ ಸಮಿತಿಯ ಅಧ್ಯಕ್ಷ ಶೈಕುನಾ ಬೇಕಲ್ ಉಸ್ತಾದ್, ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸ್ವಾಗತ ಸಮಿತಿಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಪ್ರಧಾನ ಕಾರ್ಯದರ್ಶಿ ಎಸ್.ಪ.ಹಂಝ ಸಖಾಫಿ, ಸಂಚಾಲಕ ಯೂಸುಫ್ ಸಅದಿ ಮಠ, ಕೇಂದ್ರ ಮುಶಾವರ ಕಾರ್ಯದರ್ಶಿ ತೋಕೆ ಕಾಮಿಲ್ ಸಖಾಫಿ, ಮುಖಂಡರಾದ ಹಂಝ ಮದನಿ ಮಿತ್ತೂರ್, ಕೆ.ಎಚ್.ಇಸ್ಮಾಯಿಲ್ ಸಅದಿ ಕಿನ್ಯ, ಅಶ್ ಅರಿಯಾ ಸಖಾಫಿ, ಮೂಡಡ್ಕ ಅಶ್ರಫ್ ಸಖಾಫಿ, ಅನಿವಾಸಿ ಉದ್ಯಮಿ ಇಸ್ಹಾಖ್ ಹಾಜಿ ಮೇದರಬೆಟ್ಟು , ಸಾದಾತ್ ತಂಙಳ್ ಕರುವೇಲು ಮುಂತಾದವರು ಹಾಗೂ ಸುನ್ನೀ ಸಂಘ ಕುಟುಂಬದ ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.







