ಶಿಕ್ಷಣದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರೆ ಉತ್ತಮ ಸ್ಥಾನಕ್ಕೆ ಏರಬಹುದು: ಶ್ರೀನಿವಾಸಮೂರ್ತಿ

ಬಾಗೇಪಲ್ಲಿ, ಅ.8: ಆಸ್ಟ್ರೇಲಿಯಾ ಹಾಗೂ ಕೆನಡ ದೇಶಗಳಲ್ಲಿ ಸಾಕ್ಷರತೆ ಬಗ್ಗೆ ನಮ್ಮ ದೇಶ ನೋಡಿ ಕಲಿಯಬೇಕಾಗಿದೆ ಎಂದು ಬ್ರಿಟಿಷರ ಆಡಳಿತದಲ್ಲಿ ಮೈಸೂರು ರಾಜ್ಯದ ದಿವಾನರಾಗಿದ್ದ ವಿಶ್ವೇಶ್ವರಯ್ಯ ಅವರು ಹೇಳಿದ್ದರು ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ವೇತನ ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ತಿಳಿಸಿದರು.
ರವಿವಾರ ಶ್ರೀಸದ್ಗುರು ಯೋಗಿನಾರೇಯಣ ಬಲಿಜ ಕ್ಷೇಮಾಭಿವೃದ್ಧಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಶ್ರೀಶೈಲ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಸ್ಟ್ರೇಲಿಯಾ ಮತ್ತು ಕೆನಡ ದೇಶಗಳು ಮೈಸೂರು ರಾಜ್ಯದಷ್ಟು ಜನಸಂಖ್ಯೆ ಹೊಂದಿದೆ. ಆದರೆ ಈ ದೇಶದ ಸಾಕ್ಷರತೆ ಪ್ರಮಾಣ ಶೇ.90ರಷ್ಟು ಇದೆ.100 ವರ್ಷಗಳ ನಂತರ ತಮ್ಮ ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ. ಆದರೆ 7ನೆ ತರಗತಿಯ ವಿದ್ಯಾರ್ಥಿಗಳ 6ನೆ ತರಗತಿ ಲೇಕ್ಕಗಳನ್ನು ಹಾಕುವುದರಲ್ಲಿ ತಪ್ಪು ಮಾಡುತ್ತಿದ್ದಾರೆ ಎಂದರು.
ವಿಶ್ವೇಶ್ವರಯ್ಯ ಅವರು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಉದಾಹರಣೆಗೆ ನಾನು ಓದಿದ ಮಂಡಿಕಲ್ ಸರಕಾರಿ ಪ್ರಾಥಮಿಕ ಶಾಲೆಯನ್ನು 1914ರಲ್ಲಿ ವಿಶ್ವೇಶ್ವರಯ್ಯ ದೀವನರಾಗಿದ್ದ ಕಾಲದಲ್ಲಿ ಪ್ರಾರಂಭಿಸಲಾಯಿತು. ನಂತರ ಈ ಶಾಲೆಗೆ ಶತಮಾನೋತ್ಸವವನ್ನು ಆದ್ದೂರಿಂದ ಆಚರಣೆ ಮಾಡಲಾಯಿತು. ಸಮಾಜದಲ್ಲಿ ವಿದ್ಯೆಗೆ ತುಂಬ ಗೌರವಿದೆ. ಓದಿನಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಂಡರೆ ಉತ್ತಮ ಸ್ಥಾನಗಳಿಗೆ ಏರಬಹುದು. ಈಗ ಶೇ. 100ಕ್ಕೆ 100ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿರಬಹುದು ಆದರೆ ಶೈಕ್ಷಣಿಕವಾಗಿ ಅವರ ಗುಣಮಟ್ಟ ಸ್ವಲ್ಪ ಕಳಪೆಯಿಂದ ಕೂಡಿರುವುದು ಕಂಡು ಬರುತ್ತದೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಪಕ್ಷ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎನ್.ಸಂಪಂಗಿ ಮಾತನಾಡಿ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆವಿಗೂ ಬಂದಿರುವ ಕಾವೇರಿ ನದಿ ನೀರನ್ನು ಸರ್.ಎಂ.ವಿಶ್ವೇಶ್ವರಯ್ಯ ಹುಟ್ಟೂರಾದ ಮುದ್ದೇನಳ್ಳಿಗೆ ಸರಬರಾಜು ಮಾಡಿದರೆ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ. ಕೆಆರ್ ಎಸ್.ನಿರ್ಮಾಣ ಮಾಡಿದ್ದರಿಂದ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಪ್ರತಿ ಮನೆಗಳಲ್ಲಿ ವಿಶ್ವೇಶ್ವರಯ್ಯ ಚಿತ್ರಗಳನ್ನು ಇಟ್ಟುಕೊಂಡು ಪೂಜೆ ಸಲ್ಲಿಸುತ್ತಿದ್ದಾರೆ ಎಂದ ಅವರು, ಇಲ್ಲಿನ ಜನರ ಆಶೀರ್ವಾದದಿಂದ 2 ಸಲ ಶಾಸಕನಾಗಿ ಆಯ್ಕೆಯಾಗಿದ್ದೇನೆ .ವಂಡಮಾನ್ ಕೆರೆಯಿಂದ 63 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು 10 ಕೋಟಿರೂ. ಬಿಡುಗಡೆ ಮಾಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ನಾನು ಚುನಾವಣೆಯಲ್ಲಿ ಸೋತ ನಂತರ ಕಾಮಗಾರಿಗೆ ತಂದಿದ್ದ ಯಂತ್ರೋಪಕರಣಗಳು ಮಾಯವಾಗಿ ನೆನಗುದಿಗೆ ಬಿದ್ದಿದೆ ಎಂದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಮಾಡಲಾಯಿತು.







