ಬಿಲ್ಡರ್‌ನಿಂದ 10 ಕೋಟಿ ರೂ. ಸುಲಿಗೆಗೆ ಯತ್ನ: ರವಿ ಪೂಜಾರಿ ಗ್ಯಾಂಗ್‌ನ ಇಬ್ಬರ ಸೆರೆ

ಮುಂಬೈ, ಅ.8: ಥಾಣೆಯ ಪ್ರತಿಷ್ಠಿತ ಬಿಲ್ಡರ್ ಓರ್ವರಿಂದ 10 ಕೋಟಿ ರೂ. ಸುಲಿಗೆಗೆ ಪ್ರಯತ್ನಿಸಿದ ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿ ಗ್ಯಾಂಗ್‌ನ ಇಬ್ಬರು ಶಾರ್ಪ್‌ಶೂಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಲಾಡ್ ನಿವಾಸಿ ನಿತಿನ್ ಗೋಪಾಲ್ ರಾಯ್(42 ವರ್ಷ) ಹಾಗೂ ಘಾಟ್‌ಕೋಪರ್ ನಿವಾಸಿ ದಿನೇಶ್ ನಾರಾಯಣ್ ರಾಯ್(51) ಬಂಧಿತ ರೌಡಿಗಳು. ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಹೀರಾನಂದನಿ ಎಸ್ಟೇಟ್ ಮೇಲೆ ಶುಕ್ರವಾರ ತಡರಾತ್ರಿ ದಾಳಿ ನಡೆಸಿ ಇಬ್ಬರು ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ. ತಾವು ಪ್ರತಿಷ್ಠಿತ ಬಿಲ್ಡರ್ ಓರ್ವರನ್ನು ಹತ್ಯೆಗೈಯಲು ಬಂದಿರುವುದಾಗಿ ಬಂಧಿತರು ತಿಳಿಸಿದ್ದಾರೆ.
ಬಿಲ್ಡರ್‌ಗೆ ಕರೆ ಮಾಡಿದ್ದ ರವಿ ಪೂಜಾರಿ 10 ಕೋಟಿ ರೂ. ನೀಡುವಂತೆ ಬೆದರಿಸಿದ್ದಾನೆ. ಆದರೆ ಅವರು ಹಣ ನೀಡಲು ನಿರಾಕರಿಸಿದಾಗ ಬಿಲ್ಡರ್‌ನನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮ ತಿಳಿಸಿದ್ದಾರೆ. ಬಂಧಿತರ ಬಳಿಯಿಂದ ಎರಡು ಗನ್ ಹಾಗೂ ಬುಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





