ಕೊಲೆಗೆ ಸಹಕಾರ ಆರೋಪ: ಮಹಿಳೆಯ ಬಂಧನ
ಮುಂಡಗೋಡ, ಅ.8: ಇತ್ತೀಚೆಗೆ ನಡೆದ ಲಕ್ಕೊಳ್ಳಿಯ ಸಂದೀಪ ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಸಹಕಾರ ನೀಡಿದ ಆರೋಪದ ಮೇಲೆ ಮಹಿಳೆಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ ಬಂಧಿಸಲ್ಪಟ್ಟ ಮಹಿಳೆ ಪಟ್ಟಣದ ಕಾಶವ್ವ ಪೂಜಾರ(37) ಎಂದು ತಿಳಿದು ಬಂದಿದೆ.
ಈ ಕೊಲೆಯ ಪ್ರಮುಖ ಆರೋಪಿ ಶಿಗ್ಗಾಂವ ತಾಲೂಕಿನ ಅಂದಲಗಿ ಗ್ರಾಮದ ಮುನೇಶ್ವರ ವಡ್ಡರನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪೊಲೀಸರೆದುರು ಆತ ಈ ವಿಷಯ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮುನೇಶ್ವರ ಹಾಗೂ ಕಾಶವ್ವಳ ಮಧ್ಯೆ ಇತ್ತು ಎನ್ನಲಾದ ಸಂಬಂಧದ ಕುರಿತು ಕೊಲೆಯಾದ ಸಂದೀಪ ಮುನೇಶ್ವರನ ಪಾಲಕರಿಗೆ ಮೊಬೈಲ್ ಕರೆ ಮಾಡಿ ದೂರು ಹೇಳುತ್ತಿದ್ದ ಎಂಬ ಕಾರಣಕ್ಕೆ ಇಬ್ಬರೂ ಸೇರಿ ಸಂದೀಪನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಕೊಲೆ ಮಾಡಲು ಕಾಶವ್ವ ಸಹಕಾರ ನೀಡಿದ್ದಳು ಎಂದು ಮುನೇಶ್ವರ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದು, ನೀಲಮ್ಮಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Next Story





