Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪಿಲಿಕುಳ: ಮೊದಲ ಹಂತದ ಹಸುರೀಕರಣ ಯೋಜನೆ...

ಪಿಲಿಕುಳ: ಮೊದಲ ಹಂತದ ಹಸುರೀಕರಣ ಯೋಜನೆ ಉದ್ಘಾಟನೆ

ದ್ವಿತೀಯ ಹಂತದ ಯೋಜನೆಗೆ ಚಾಲನೆ

ವಾರ್ತಾಭಾರತಿವಾರ್ತಾಭಾರತಿ8 Oct 2017 11:07 PM IST
share
ಪಿಲಿಕುಳ: ಮೊದಲ ಹಂತದ ಹಸುರೀಕರಣ ಯೋಜನೆ ಉದ್ಘಾಟನೆ

ಮಂಗಳೂರು, ಅ.8: ಎಂಆರ್‌ಪಿಎಲ್‌ನ ಪರಿಸರ (ಎಚ್‌ಎಸ್‌ಇ) ವಿಭಾಗದ ವತಿಯಿಂದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಅನುಷ್ಠಾನಗೊಳಿಸಲಾದ 1ನೆ ಹಂತದ ಹಸುರೀಕರಣ ಕಾರ್ಯಕ್ರಮದ ಉದ್ಘಾಟನೆ ಹಾಗೂ 2ನೆ ಹಂತದ ಯೋಜನೆಗೆ ರವಿವಾರ ಚಾಲನೆ ನೀಡಲಾಯಿತು.

ಎಂಆರ್‌ಪಿಎಲ್ ಹಾಗೂ ಪಿಲಿಕುಳ ಅಧಿಕಾರಿಗಳ ಸಮ್ಮುಖದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಸಿದರು.
ಬಳಿಕ ಮಾತನಾಡಿದ ಅವರು ಪರಿಸರ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅರಣ್ಯ ಸಂಪತ್ತು ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ. ಹೀಗಾಗಿ ಎಂಆರ್‌ಪಿಎಲ್‌ನಂತಹ ಕಂಪೆನಿಗಳು ಪರಿಸರ ಪೂರಕ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದರು.

ಇಂದಿರಾ ಗಾಂಧಿ ಪ್ರಧಾನಿಯಾದ ಬಳಿಕ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ತರುವ ಮೂಲಕ ಪ್ರಾಣಿ ಭೇಟೆಯನ್ನು ತಡೆಯಲಾಯಿತು. ಕಾಡು ನಾಶದಿಂದ ವನ್ಯಜೀವಿಗಳು ನಾಡಿಗೆ ಬರುವ ಸ್ಥಿತಿ ಇದೆ. ಇದನ್ನು ತಡೆಯುವುದು ಅನಿವಾರ್ಯವಾಗಿದೆ. ಅರಣ್ಯವು ನೀರಿನ ಮೂಲವಾಗಿದ್ದು, ಅರಣ್ಯ ನಾಶವಾದರೆ ನದಿಗಳು ಬತ್ತಿ ಹೋಗುವ ಸಾಧ್ಯತೆಯೂ ಇದೆ. ಹೀಗಾಗಿ ಅರಣ್ಯದ ಉಳಿವಿಗೆ ಸರಕಾರದ ಜತೆ ಜನರ ಸಹಕಾರವೂ ಅಗತ್ಯ ಎಂದು ಸಚಿವ ರೈ ನುಡಿದರು.

ಪಿಲಿಕುಳ ನಿಸರ್ಗಧಾಮದ ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಚಿತ್ರಕಲೆ, ಛದ್ಮವೇಷ ಸ್ಪರ್ಧೆಯನ್ನು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು. ಈ ಸಂದರ್ಭ ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕ ಎಚ್.ಕುಮಾರ್, ರಿಫೈನರಿ ನಿರ್ದೇಶಕ ಎಂ.ವೆಂಕಟೇಶ್, ಹಣಕಾಸು ನಿರ್ದೇಶಕ ಎ.ಕೆ.ಸಾಹೂ, ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ವಿ.ಪ್ರಸನ್ನ ಉಪಸ್ಥಿತರಿದ್ದರು.

ಹಸುರೀಕರಣ ಯೋಜನೆ ಹೊಸ ಕೈಗಾರಿಕೆ ಸ್ಥಾಪನೆಗೊಂಡ ಸಂದರ್ಭ ಅದರ ವ್ಯಾಪ್ತಿಯ 1/3 ಭಾಗದಲ್ಲಿ ಹಸುರೀಕರಣ ಯೋಜನೆ ಅನುಷ್ಠಾನಗೊಳಿಸಬೇಕು ಎಂಬ ನಿಯಮವಿದೆ. ಅದರಂತೆ ಎಂಆರ್‌ಪಿಎಲ್ ವತಿಯಿಂದ ಪಿಲಿಕುಳದಲ್ಲಿ 2016ರ ಜೂನ್‌ನಲ್ಲಿ 20 ಎಕರೆ ವಿಸ್ತೀರ್ಣದಲ್ಲಿ ಹಸುರೀಕರಣ ಯೋಜನೆ ಆರಂಭಿಸಲಾಗಿತ್ತು. ಅದಕ್ಕಾಗಿ 30 ಲಕ್ಷ ರೂ.ಅನುದಾನವನ್ನು ನೀಡಿ ಸಾವಿರಾರು ಗಿಡಗಳನ್ನು ನೆಡಲಾಗಿತ್ತು. ಗಿಡಗಳನ್ನು ನೆಡುವ ಸಂದರ್ಭ ಪಶ್ಚಿಮ ಘಟ್ಟಗಳ ಸಸ್ಯಗಳು, ಔಷಧೀಯ ಸಸ್ಯಗಳು, ಜಲ ಸಸ್ಯಗಳು ಹಾಗೂ ಮೇವು ಹುಲ್ಲುಗಳನ್ನು ನೆಡಲಾಗಿತ್ತು. ಪಶ್ಚಿಮ ಘಟ್ಟಗಳ ಸಸ್ಯಗಳಲ್ಲಿ 52 ಜಾತಿಯ 2 ಸಾವಿರ ಗಿಡಗಳು, ಔಷಧೀಯ ಸಸ್ಯಗಳಲ್ಲಿ 50 ಜಾತಿಯ ಸಾವಿರ ಗಿಡಗಳು, ಜಲ ಸಸ್ಯಗಳಲ್ಲಿ 10 ಜಾತಿಯ 100 ಗಿಡಗಳನ್ನು ನೆಡಲಾಗಿದೆ.
60 ಹುಲ್ಲುಗಳ ಸಾಲು
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲ್ಲುಗಳ ಆವಶ್ಯಕತೆ ಇರುತ್ತದೆ. ಅದರಂತೆ ಇಲ್ಲಿ ನೆಟ್ಟಿರುವ ಸಾವಿರಾರು ಗಿಡಗಳ ಮಧ್ಯೆ ಹುಲ್ಲುಗಳನ್ನು ಬೆಳೆ ಸಲಾಗಿದೆ. ಸುಮಾರು 60 ಸಾಲು ಹುಲ್ಲುಗಳು ಇಲ್ಲಿದ್ದು, ದಿನಕ್ಕೆ ಒಂದು ಸಾಲು ಹುಲ್ಲಿನ ಬೇಕಾಗಿದೆ. ಒಮ್ಮೆ ಕಟಾವು ಮಾಡಿದ ಹುಲ್ಲು ಮತ್ತೊಮ್ಮೆ ಕಟಾವಿಗೆ ಬರಲು 40 ದಿನಗಳು ಬೇಕಾಗುತ್ತದೆ ಎಂದು ಪಿಲಿಕುಳದ ಅಧಿಕಾರಿಗಳು ಹೇಳುತ್ತಾರೆ.
ಚಿಟ್ಟೆ ಆಕರ್ಷಣೆಯ ಗಿಡಗಳು
ಜೈವಿಕ ಉದ್ಯಾನವನದಲ್ಲಿ ಚಿಟ್ಟೆಗಳನ್ನು ಆಕರ್ಷಿಸುವುದಕ್ಕಾಗಿ 150 ಜಾತಿಯ 1 ಸಾವಿರ ಗಿಡಗಳನ್ನು ನೆಡಲಾಗಿದೆ. ಅವುಗಳಲ್ಲಿ ಹೋಸ್ಟ್ ಹಾಗೂ ಮಕರಂಧ ಎಂಬ ಎರಡು ಪ್ರಮುಖ ವಿಧಗಳಿವೆ. ಅಗ್ನಿಮಂತ್ರ, ಕುಂಟಾಲು, ನೆಡಿಲ್, ಹೆಮೆಲಿಯಾ, ಕಾಡು ರುದ್ರಾಕ್ಷಿ, ಬೊಳಂಟೆ, ನೇರಳೆ ಮೊದಲಾದ ಗಿಡಗಳನ್ನು ಚಿಟ್ಟೆಗಳ ಆಕರ್ಷಣೆಗಾಗಿಯೇ ಬೆಳೆಸಲಾಗಿದೆ.
ಅಕೇಶಿಯಾ ತೆರವು ಕಾರ್ಯ
ಮೊದಲು ಇಲ್ಲಿ ಅಕೇಶಿಯಾ ಗಿಡಗಳನ್ನು ನೆಡಲಾಗಿದ್ದರೂ, ಪ್ರಸ್ತುತ ಅದು ಪರಿಸರಕ್ಕೆ ಹಾನಿ ಎಂಬ ಉದ್ದೇಶದಿಂದ ಹಂತ ಹಂತವಾಗಿ ತೆರವುಗೊಳಿಸಲಾ ಗುತ್ತಿದೆ. ಇಲ್ಲಿನ ಪ್ರಾಣಿಗಳಿಗೆ ನೆರಳಿನ ಆವಶ್ಯಕತೆ ಇರುವುದರಿಂದ ಒಮ್ಮೆಲೆ ಈ ಗಿಡಗಳನ್ನು ತೆಗೆಯುವಂತಿಲ್ಲ. ಹಿಂದೆ ನೆಟ್ಟ ಮರಗಳಿಗಿಂತ ಅಧಿಕ ಗಿಡಗಳು ಇಲ್ಲಿ ಹುಟ್ಟಿಕೊಂಡಿದ್ದು, ಅದರ ತರಗೆಲೆಗಳ ಮೇಲೆ ನೀರು ಬಿದ್ದರೆ ಇಂಗದಂತಹ ಪರಿಸ್ಥಿತಿ ಇದೆ. ಹೀಗಾಗಿ ಪ್ರಥಮ ಹಂತ ಹಸುರೀಕರಣದ ಸಂದರ್ಭವೂ ಅಕೇಶಿಯಾವನ್ನು ತೆಗೆಯಲಾಗಿದೆ. ಇದೀಗ 2ನೆ ಹಂತದಲ್ಲಿ ರಸ್ತೆ ಬದಿಯ ಅಕೇಶಿಯಾವನ್ನು ತೆಗೆದು ಅಲ್ಲಿ ಪಶ್ಚಿಮ ಘಟ್ಟದ ಗಿಡಗಳನ್ನು ನೆಡಲಾಗುತ್ತದೆ ಎಂದು ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದರು.
ಜೋಕಟ್ಟೆಯಲ್ಲಿ ಹಸುರೀಕರಣ
ಎಂಆರ್‌ಪಿಎಲ್ ಪ್ರಯೋಜಕತ್ವದಲ್ಲಿ ಜೋಕಟ್ಟೆಯಲ್ಲೂ 27 ಎಕರೆ ವ್ಯಾಪ್ತಿಯಲ್ಲಿ ಹಸುರೀಕರಣ ಯೋಜನೆ ಅರಂಭಿಸಲು ಮಾತುಕತೆ ನಡೆಯುತ್ತದೆ. ಜಿಲ್ಲಾಧಿಕಾರಿಯ ಅನುಮತಿ ಸಿಕ್ಕರೆ ಅಲ್ಲೂ ಹಸುರೀಕರಣ ಯೋಜನೆಯಲ್ಲಿ ಗಿಡಗಳನ್ನು ನೆಡಲಾಗುತ್ತದೆ ಎಂದು ಎಂಆರ್‌ಪಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.


 2ನೆ ಹಂತದ ಹಸುರೀಕರಣ
 ಎಂಆರ್‌ಪಿಎಲ್ ಪ್ರಯೋಜಕತ್ವದ 2ನೆ ಹಂತದ ಹಸುರೀಕರಣ ಯೋಜನೆಯಲ್ಲಿ ಸುಮಾರು 30 ಎಕರೆ ವ್ಯಾಪ್ತಿಯಲ್ಲಿ 40 ಲಕ್ಷ ರೂ.ಅನುದಾನದಲ್ಲಿ ಪಶ್ಚಿಮ ಘಟ್ಟಗಳ ಸಸ್ಯಗಳನ್ನು ಬೆಳೆಸಲಾಗುತ್ತದೆ. ಜೈವಿಕ ಉದ್ಯಾನದ ರಸ್ತೆ ಬದಿಗಳಲ್ಲಿ 5 ಮೀ.ವ್ಯಾಪ್ತಿಯಲ್ಲಿ ಗಿಡ ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ.
ಪಿಲಿಕುಳಕ್ಕೆ ವೈಟ್‌ಟೈಗರ್!
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರಸ್ತುತ 120 ಜಾತಿಯ 1200 ವನ್ಯಜೀವಿಗಳಿದೆ. ಬಿಳಿಹುಲಿ ಹಾಗೂ ಬೈಸನ್ (ಕಾಡುಕೋಣ-ಕಾಡೆಮ್ಮೆ) ತಿಂಗಳೊಳಗೆ ಪಿಲಿಕುಳಕ್ಕೆ ಸೇರ್ಪಡೆಯಾಗಲಿದೆ. 1 ಜೋಡಿ ಬಿಳಿಹುಲಿಯನ್ನು ರಾಜ್‌ಕೋಟ್‌ನಿಂದ ತರುವ ಬಗ್ಗೆ ಮಾತುಕತೆ ನಡೆಯುತ್ತದೆ.

ಎರಡು ಜೋಡಿ ಬೈಸನ್‌ಗಳನ್ನು ತರಲಾಗುತ್ತಿದ್ದು, ಒಂದು ಜೋಡಿ ಚೆನ್ನೈ ಹಾಗೂ ಇನ್ನೊಂದು ಜೋಡಿಯನ್ನು ತಿರುವನಂತಪುರದಿಂದ ತರಲಾಗುತ್ತಿದೆ. ಮೃಗಾಲಯಗಳಿಗೆ ಪ್ರಾಣಿಗಳನ್ನು ತರುವಾಗ ಅದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಬದಲಾಗಿ ಒಂದು ಪ್ರಾಣಿಯನ್ನು ಕೊಟ್ಟು ಮತ್ತೊಂದನ್ನು ತರಲಾಗುತ್ತದೆ ಎಂದು ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದರು.

ಪ್ರಸ್ತುತ ಪಿಲಿಕುಳದಲ್ಲಿ 11 ಹುಲಿಗಳಿದ್ದು, ಅದರಲ್ಲಿ 6ನ್ನು ಉಳಿಸಿಕೊಳ್ಳಲಾಗುತ್ತದೆ. ಉಳಿದವುಗಳನ್ನು ಕೊಟ್ಟು ಬಿಳಿಹುಲಿಗಳನ್ನು ತರಲಾಗುತ್ತದೆ. ಪಿಲಿಕುಳ ದೇಶದ ಬೃಹತ್ ಮೃಗಾಲಯಗಳಲ್ಲಿ ಒಂದಾಗಿದೆ. ಕಾಳಿಂಗಸರ್ಪ (ಕಿಂಗ್‌ಕೊಬ್ರಾ)ವನ್ನು ನೀಡಿ ಬೈಸನ್‌ಗಳನ್ನು ತರಲು ಮಾತುಕತೆ ನಡೆದಿದೆ ಎಂದು ಜಯಪ್ರಕಾಶ್ ಭಂಡಾರಿ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X