ಎನ್‌ಎಚ್‌ಎಐ ಸಮಸ್ಯೆ ಬಗ್ಗೆ ನಾಗರಿಕ ಸಮಿತಿಯಿಂದ ಸಮಾಲೋಚನೆ

ಮಂಗಳೂರು, ಅ.8: ಸುರತ್ಕಲ್‌ನಿಂದ ಬಿ.ಸಿ.ರೋಡ್‌ನವರೆಗೆ ಕೆಟ್ಟು ಹೋಗಿರುವ ಹೆದ್ದಾರಿ ಮತ್ತು ಸರ್ವಿಸ್ ರಸ್ತೆಯ ಸಮಸ್ಯೆಯ ಕುರಿತು ಎನ್‌ಎಚ್‌ಎಐ ಯೋಜನಾ ನಿರ್ದೇಶಕರ ಆಹ್ವಾನದ ಮೇರೆಗೆ ನಾಗರಿಕ ಸಮಿತಿಯ ಮಂಗಳೂರು ತಾಲೂಕು ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಹೊಸಬೆಟ್ಟು ನೇತೃತ್ವದ ತಂಡವು ನಗರದ ಕಚೇರಿಯಲ್ಲಿ ಚರ್ಚಿಸಿತು.
ಹೆದ್ದಾರಿಯಲ್ಲಿ ಎದುರಾಗಿರುವ ಅಪಾಯಕಾರಿ ಹೊಂಡವನ್ನು ಗ್ರಾನ್ಯುಲಾಕ್ ಸಬ್ ಬೇಸ್ ಮೂಲಕ ಹೋಲ್‌ಗಳನ್ನು ಡಾಮರು ಮಿಶ್ರಿತ ಜಲ್ಲಿಯಿಂದ ತುರ್ತಾಗಿ ಮುಚ್ಚಬೇಕು. ಸರ್ವಿಸ್ ರಸ್ತೆಯನ್ನು ಮಳೆಯ ಕಾರಣ ಡಾಮರು ಹಾಕಲಾಗದಿದ್ದರೂ ಮೋಟಾರೇಬಲ್ ಆಗಿ ಸುಸ್ಥಿತಿಯಲ್ಲಿಡಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿತು.
ಹೆಜಮಾಡಿ ಟೋಲ್ ಓಪನ್ ಆದ ಕೂಡಲೇ ಎನ್‌ಐಟಿಕೆ ಬಳಿಯ ಟೋಲ್ ಮುಚ್ಚಲು ಎನ್‌ಎಚ್‌ಎಐ ಕೇಂದ್ರ ಕಚೇರಿಯಲ್ಲಿ ನಿರ್ಧಾರವಾಗಿದ್ದರೂ ಕೂಡಾ ತಾವು ಎನ್‌ಐಟಿಕೆ ಬಳಿ ಟೋಲ್ ಸಂಗ್ರಹ ಮಾಡುತ್ತಿದ್ದೀರಿ. ಈ ಟೋಲ್‌ನ್ನು ಕೂಡಲೇ ಹೆಜಮಾಡಿಗೆ ವಿಲೀನಗೊಳಿಸಬೇಕು ಎಂದು ಸಮಿತಿ ಮನವಿ ಮಾಡಿತು.
ಈ ಸಂದರ್ಭ ಸಮಿತಿಯ ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಕಾರ್ಯದರ್ಶಿ ರಾಘವೇಂದ್ರ ಟಿ.ಎನ್., ಉಲ್ಲಾಸ್ ಶೆಟ್ಟಿ, ಸುಧಾಕರ ಪೂಂಜ, ಹಮೀದ್ ಕಾನ, ಎಂ.ಬಿ. ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಮದ್ಯ, ರಾಖಿ ಪಿಂಟೊ, ಬಾಲಕೃಷ್ಣ ಶೆಟ್ಟಿ ಕೆಂಚನಕೆರೆ, ನಟರಾಜ್, ನಿತ್ಯಾನಂದ, ಬಿ.ಎಂ. ಸನಿಲ್, ಯಶವಂತ್ ಶೆಟ್ಟಿ ಉಪಸ್ಥಿತರಿದ್ದರು







