ಅಂಗಾಂಗ ದಾನ ಮಾಡುವ ಮೂಲಕ ಸತ್ತ ಬಳಿಕವೂ ಜೀವಂತವಾಗಿರಿ: ಎಸ್ಪಿ ರವಿ ಡಿ.ಚನ್ನಣ್ಣನವರ್
ಮೈಸೂರು, ಅ.8: ಕಣ್ಣು, ಹೃದಯ ಕವಾಟ, ಚರ್ಮ, ಮೂಳೆ, ರಕ್ತನಾಳಗಳನ್ನು ದಾನ ಮಾಡಿ ಸತ್ತ ನಂತರವೂ ಜೀವಂತವಾಗಿರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಅಭಿಪ್ರಾಪಟ್ಟಿದ್ದಾರೆ.
ಅಂಗಾಂಗ ದಾನದ ಕುರಿತು ಸಾರ್ವಜನಿಕರಲ್ಲಿ ಆರೋಗ್ಯದ ಅರಿವು ಮೂಡಿಸುತ್ತಿರುವ ಛೇರ್‍ವುಮಾನ್ ಆಫ್ ಯಂಗ್ ಇಂಡಿಯನ್ಸ್ ಮಹಿಳಾ ಸಂಸ್ಥೆ ಜೆಎಸ್‍ಎಸ್ ಆಸ್ಪತ್ರೆಯ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿ ಮಾತನಾಡಿದ ಅವರು, ಅಂಗಾಂಗಳು ಸತ್ತ ನಂತರ ಮಣ್ಣು ಸೇರುತ್ತವೆ. ಆದರೆ ಇನ್ನೊಬ್ಬರಿಗೆ ದಾನ ಮಾಡಿದರೆ ಅಮೂಲ್ಯ ಜೀವವಾದರೂ ಉಳಿಯುತ್ತದೆ. ಹಾಗಾಗಿ ಅಂಗಾಂಗ ದಾನ ಮಾಡಿ ಎಂದು ಸಲಹೆ ನೀಡಿದರು.
ನಾಗರಿಕರೇ ಅಂಗಾಂಗ ದಾನ ಮಾಡಿ ಇತರರ ಪ್ರಾಣವನ್ನು ಬದುಕಿಸಿ ಆಶಯದಲ್ಲಿ ಗಿಫ್ಟ್ ಆನ್ ಅರ್ಗನ್ ಎಂಬ ವಿನೂತನ ಜಾಗೃತಿ ಜಾಥಾ ನಗರದಲ್ಲಿ ನಡೆಸುವುದರ ಮೂಲಕ ಸಾರ್ವಜನಿಕರ ಗಮನ ಸೆಳೆಯಲಾಯಿತು. ಇದೇ ವೇಳೆ ಅಂಗಾಂಗ ದಾನ ಮಾಡಿಸಿಕೊಂಡು ಆರೋಗ್ಯವಂತರಾಗಿರುವ ಮಡಿಕೇರಿಯ ಚಾಂದಿನಿ ಮತ್ತು ಮಂಜುನಾಥ್ ಅಂಗಾಂಗ ದಾನದ ಮಹತ್ವವವನ್ನು ಹಂಚಿಕೊಂಡರು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ಜಾಥಾ ದೊಡ್ಡಗಡಿಯಾರ ರಸ್ತೆಯಲ್ಲಿ ಸಾಗಿ ಅರಿವು ಮೂಡಿಸಿತು.
ಜಾಥಾದಲ್ಲಿ ಜೆಎಸ್‍ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ರವಿ, ಡಾ.ಮಂಜುನಾಥ್, ಡಾ.ಗೋರಿ, ಛೆ-ೀರ್‍ವುಮಾನ್ ಆಫ್ ಯಂಗ್ ಇಂಡಿಯನ್ಸ್ ಅಕ್ಷರ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







