ಗಾರ್ಸಿಯಾ ಚೀನಾ ಓಪನ್ ಚಾಂಪಿಯನ್
ನಂ.1 ಹಾಲೆಪ್‌ಗೆ ಸೋಲುಣಿಸಿದ ಫ್ರಾನ್ಸ್‌ನ ತಾರೆ

ಬೀಜಿಂಗ್, ಅ.8: ಫ್ರಾನ್ಸ್‌ನ ಶ್ರೇಯಾಂಕ ರಹಿತ ಕರೋಲಿನಾ ಗಾರ್ಸಿಯಾ ರವಿವಾರ ಚೀನಾ ಓಪನ್ ಫೈನಲ್‌ನಲ್ಲಿ ವಿಶ್ವದ ನಂ.1 ತಾರೆ ರುಮೆನಿಯಾದ ಸಿಮೊನಾ ಹಾಲೆಪ್ ವಿರುದ್ಧ ಗೆಲುವು ದಾಖಲಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಜಾಗತಿಕ ಮಹಿಳಾ ಟೆನಿಸ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದ್ದ ಬೆನ್ನಲ್ಲೇ ಸಿಮೊನಾ ಹಾಲೆಪ್ ಅವರು ಚೈನಾ ಓಪನ್‌ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಎಡವಿದ್ದಾರೆ.
ಫೈನಲ್‌ನಲ್ಲಿ ಹಾಲೆಪ್ ವಿರುದ್ಧ ಗಾರ್ಸಿಯಾ ಅವರು 6-4, 7-6(7/3) ಸೆಟ್‌ಗಳ ಅಂತರದಲ್ಲಿ ಜಯ ಗಳಿಸಿ ಎರಡನೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಗಾರ್ಸಿಯಾ ಅವರು ಕಳೆದ ವಾರ ವೂಹಾನ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದರು. ಇದು ಅವರು ವೃತ್ತಿ ಬದುಕಿನಲ್ಲಿ ಜಯಿಸಿದ 5ನೆ ಪ್ರಶಸ್ತಿಯಾಗಿದೆ.ಗಾಯದಿಂದ ಬಳಲುತ್ತಿದ್ದ ಗಾರ್ಸಿಯಾ ಕಳೆದ ಶುಕ್ರವಾರ ಕ್ವಾರ್ಟರ್ ಫೈನಲ್‌ನಲ್ಲಿ ಆಡುವಾಗ ಸಮಸ್ಯೆ ಎದುರಿಸಿದ್ದರು. ಆದರೆ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಕಠಿಣ ಹೋರಾಟ ನಡೆಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರು.
23ರ ಹರೆಯದ ಗಾರ್ಸಿಯಾ ಅವರಿಗೆ ಫೈನಲ್‌ನಲ್ಲಿ ಸವಾಲು ಸುಲಭವಾಗಿರಲಿಲ್ಲ. ಈ ಹಿಂದೆ ಎರಡು ಬಾರಿ ಹಾಲೆಪ್‌ಗೆಶರಣಾಗಿದ್ದರು. ಆದರೆ ಈ ಬಾರಿ ಗಾರ್ಸಿಯಾ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾದರು.







