ಮೋದಿಯಿಂದ ಬರೀ ಸುಳ್ಳು ಭರವಸೆ: ಗಾಯತ್ರಿ ಶಾಂತೇಗೌಡ

ಚಿಕ್ಕಮಗಳೂರು, ಅ.8: ಮೋದಿ ಅವರು ಕಳೆದ ಸಂಸತ್ ಚುನಾವಣೆಗೂ ಮುನ್ನ ಅಧಿಕಾರಕ್ಕೇರಿದರೆ 3 ಕೋಟಿ ಉದ್ಯೋಗ ಹಾಗೂ ಎಲ್ಲರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ. ಜಮೆ ಮಡುವುದಾಗಿ ಸುಳ್ಳು ಭರವಸೆ ನೀಡಿದ್ದು, ಇದೀಗ ಕಂಗಾಲಾಗಿದ್ದಾರೆ ಎಂದು ಮಾಜಿ ಎಮ್ಮೆಲ್ಸಿ ಎ.ವಿ.ಗಾಯತ್ರಿ ಶಾಂತೇಗೌಡ ಟೀಕಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ಚಿಕ್ಕಮಗಳೂರು ವಿಧಾನ ಸಭಾ ಅಧ್ಯಕ್ಷ ರಾಹಿಲ್ ಶರೀಫ್ ನೇತೃತ್ವದಲ್ಲಿ ನಡೆದ ವಿವಿಧ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕೇಂದ್ರ ಸರಕಾರದ ಕಪಟತನ ಜನಸಾಮಾನ್ಯರಿಗೂ ಮನವರಿಕೆಯಾಗಿದೆ. ಬೆಲೆ ಏರಿಕೆ ಇಳಿಸುವ ಭರವಸೆ ನೀಡಿದ ಬಿಜೆಪಿ ಇದೀಗ ಬೆಲೆ ಇಳಿಕೆಗೆ ಪ್ರಯತ್ನಿಸದೆ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಮಾತನಾಡಿ, ಯುವಜನರು ರಾಜಕೀಯ ದೋಣಿಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಬರಬೇಕು. ದೇಶ ಕಟ್ಟಿಲು ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ರಾಹಿಲ್ ಶರೀಪ್ ಮಾತನಾಡಿದರು. ಯುವಕರು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಮಹಮದ್ ಸಮ್ಮುಖದಲ್ಲಿ ಸೇರ್ಪಡೆಯಾದರು. ಕೆ.ರಾಹುಲ್ ಪ್ರಭು ಅವರನ್ನು ಚಿಕ್ಕಮಗಳೂರು ಯುವ ಕಾಂಗ್ರೆಸ್ ನಗರ ಕಾರ್ಯದರ್ಶಿಯಾಗಿ ಇದೇ ವೇಳೆ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಯುವ ಕಾಂಗ್ರೆಸಿನ ಜಿಲ್ಲಾ ಉಪಾಧ್ಯಕ್ಷ ಬಿ.ಅದಿತ್ಯ, ಜಿ.ವಿನಾಯಕ, ಪ್ರಧಾನ ಕಾರ್ಯದರ್ಶಿಸಿ.ಸಿ .ಮಧು, ಮಂಜುನಾಥ್, ಸುಬಾನ್, ಬ್ಲಾಕ್ ಅಧ್ಯಕ್ಷ ಸಿ.ಡಿ.ಶಿವಶಂಕರ್, ಚಿಕ್ಕಮಗಳೂರು ಬ್ಲಾಕ್ ಉಪಾಧ್ಯಕ್ಷ ಮೋಹನ್ ಕುಮಾರ್, ನಿಟ್ಟೆಕೆರೆ ಹೋಬಲಿ ಅಧ್ಯಕ್ಷ ನಾಗೇಶ್, ಮಾಜಿ ಸಿಡಿಎ ಸದಸ್ಯ ಧರ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.







