ಗ್ಯಾಸ್ ಬೆಲೂನ್ ಸ್ಫೋಟ :15 ಮಂದಿಗೆ ಗಾಯ

ಮೀರತ್, ಅ. 8: ಚಂಡಿಗಢದ ಸೆಕ್ಟರ್ 34ರಲ್ಲಿ ಸಂಜೆ ನಡೆದ ಸಮಾರಂಭದ ವೇಳೆ ಗ್ಯಾಸ್ ಬೆಲೂನ್ ಸ್ಫೋಟಗೊಂಡು ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ. ಅಲೆನ್ ಕೆರೀರ್ ಇನ್‌ಸ್ಟಿಟ್ಯೂಟ್‌ನ ವಾರ್ಷಿಕ ಸಮಾರಂಭ ನಡೆಯುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ನೈಟ್ರೊಜನ್ ಬೆಲೂನ್ ವಿದ್ಯುತ್ ಬಲ್ಪ್‌ಗೆ ಸಿಲುಕಿಕೊಂಡಿತು. ಬಲ್ಪ್‌ನ ಶಾಖದ ಕಾರಣಕ್ಕೆ ಬೆಲೂನ್ ಸ್ಫೋಟಗೊಂಡು ದುರ್ಘಟನೆ ನಡೆಯಿತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಗಾಯಗೊಂಡವರಲ್ಲಿ ಹೆಚ್ಚಿನವರು ಸಂಸ್ಥೆಯ ಹಳೇ ವಿದ್ಯಾರ್ಥಿಗಳು. ಕಾರ್ಯಕ್ರಮಕ್ಕಾಗಿಯೇ ಅವರನ್ನು ಆಹ್ವಾನಿಸಲಾಗಿತ್ತು.
ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸ್ಥಿತಿ ಸ್ಥಿರವಾಗಿದೆ. ಆದಾಗ್ಯೂ, ದುರ್ಘಟನೆ ಸ್ಪಷ್ಟ ಕಾರಣ ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Next Story





