ನಾನು ಧೈರ್ಯಶಾಲಿ ಅಲ್ಲ, ಕೇವಲ ಪತ್ರಕರ್ತೆ
ಜಯ್ ಶಾ ಮೊಕದ್ದಮೆ ಹೇಳಿಕೆಗೆ ರೋಹಿಣಿ ಸಿಂಗ್ ಪ್ರತಿಕ್ರಿಯೆ

ಹೊಸದಿಲ್ಲಿ, ಅ. 9: ‘ದಿ ವೈರ್’ ನ ತನಿಖಾ ವರದಿ ವಿರುದ್ಧ 100 ಕೋ. ರೂ. ಮೊಕದ್ದಮೆ ದಾಖಲಿಸಲಾಗುವುದು ಎಂಬ ಜಯ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪತ್ರಕರ್ತೆ ರೋಹಿಣಿ ಸಿಂಗ್, ನನ್ನ ಪ್ರಾಥಮಿಕ ಕೆಲಸ ಆಡಳಿತದ ಸತ್ಯಾಸತ್ಯತೆಯ ಬಗ್ಗೆ ಮಾತನಾಡುವುದು, ಅಸ್ತಿತ್ವದಲ್ಲಿರುವ ಸರಕಾರವನ್ನು ಪ್ರಶ್ನಿಸುವುದು ಎಂದಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ವ್ಯವಹಾರದ ಬಗ್ಗೆ ಪ್ರಶ್ನಿಸಿ ದಿ ವೈರ್ ರವಿವಾರ ವಿಶೇಷ ವರದಿ ಪ್ರಕಟಿಸಿದ ಬಳಿಕ, ‘ದಿ ವೈರ್’ ಹಾಗೂ ವಿಶೇಷ ವರದಿ ಮಾಡಿ ಪತ್ರಕರ್ತೆ ರೋಹಿಣಿ ಸಿಂಗ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಯ್ ಶಾ ಹೇಳಿದ್ದರು.
“ನಾನು ಧೈರ್ಯಶಾಲಿ ಅಲ್ಲ. ನಾನು ಪತ್ರಕರ್ತೆ. ಇತರ ಕೆಲವು ಪತ್ರಕರ್ತರಂತೆ ನಾನು ಆಷಾಢಭೂತಿತನದಿಂದ ಬರೆಯಲಾರೆ. ನಾನು ನನಗಾಗಿ ಮಾತನಾಡುತ್ತೇನೆ. ನನ್ನ ಪ್ರಾಥಮಿಕ ಕೆಲಸ ಆಡಳಿತದ ಸತ್ಯಾಸತ್ಯತೆಯ ಬಗ್ಗೆ ಮಾತನಾಡುವುದು. ಇಂದಿನ ಸರಕಾರವನ್ನು ಪ್ರಶ್ನಿಸುವುದು” ಎಂದು ರೋಹಿಣಿ ಸಿಂಗ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
“ಪತ್ರಕರ್ತರು ತಮ್ಮನ್ನು ಅನುಸರಿಸುವಂತೆ ಮಾಡಲು ಪ್ರಭಾವಶಾಲಿ ವ್ಯಕ್ತಿಗಳು ಬೆದರಿಕೆ ಹಾಗೂ ಕಿರುಕುಳ ನೀಡುತ್ತಾರೆ. ನನಗೆ ಇನ್ನೊಬ್ಬರ ಬಗ್ಗೆ ಗೊತ್ತಿಲ್ಲ. ಆದರೆ, ನಾನು ಇಂತಹ ವಿಷಯಗಳ ಬಗ್ಗೆ ಬೆಳಕು ಚೆಲ್ಲುವುದನ್ನು ಬಯಸುವೆ. ನನ್ನ ಸುತ್ತ ಆಗಾಗ ಕಂಡು ಬರುವ ಇಂತಹ ವಿಷಯಗಳನ್ನು ವರದಿ ಮಾಡದೇ ಇರುವುದಕ್ಕಿಂತ ಪತ್ರಿಕೋದ್ಯಮಕ್ಕೆ ರಾಜೀನಾಮೆ ನೀಡುವುದೇ ಉತ್ತಮ” ರೋಹಿಣಿ ಸಿಂಗ್ ದಿ ವೈರ್ ಪತ್ರಕರ್ತೆ







