ಚಿಕ್ಕಮಗಳೂರು: ಜಿಲ್ಲಾಧಿಕಾರಿಗೆ ಬೀಳ್ಕೊ ಡುಗೆ ಸಮಾರಂಭ

ಚಿಕ್ಕಮಗಳೂರು, ಅ.9: ಜಿಲ್ಲಾಧಿಕಾರಿ, ಪ್ರಭಾರ ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಜಿ.ಸತ್ಯವತಿ ಅವರಿಗೆ ಸೋಮವಾರ ಜಿಪಂ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಸತ್ಯವತಿ, ಕೊನೆಯ ತನಕ ಪ್ರಯತ್ನ ಪಟ್ಟಲ್ಲಿ ಸರಿಯಾದ ಫಲ ಸಿಗುತ್ತದೆ. ತನ್ನ ಒಂದು ವರ್ಷದ ಆಡಳಿತಾವಧಿಯಲ್ಲಿ ಬರಗಾಲದ ಸಮಸ್ಯೆಯನ್ನು ಬಹಳಷ್ಟು ಎದುರಿಸಿದ್ದು, 56 ಜನ ರೈತರು ಸಾವನ್ನಪ್ಪಿದ್ದಾರೆ. ಇದು ಬಹಳಷ್ಟು ದುಃಖದ ವಿಷಯವಾಗಿದೆ. ರೈತರಿಗೆ ಬೆಳೆ ಪರಿಹಾರ ನೀಡುವುದು ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಬಹಳಷ್ಟು ಎದುರಿಸಬೇಕಾಯಿತು ಎಂದು ತಿಳಿಸಿದರು.
ಕಡೂರಿನಲ್ಲಿ ಒಂದೇ ವಾರದಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಬಹಳಷ್ಟು ವಿಷಾದಕರ ಸಂಗತಿ. ಸರಕಾರ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಧಿಕಾರ ಸಮರ್ಪಕವಾಗಿರಬೇಕಾದರೆ ತಂತ್ರಜ್ಞಾನದ ಬಳಕೆ ಹೆಚ್ಚಾಗಬೇಕು ಎಂದರು.
Next Story





