ಮೋದೀಜಿ ನೀವು ವಾಚ್‌ಮ್ಯಾನ್‌ನಂತೆ ನಟಿಸುತ್ತೀರಾ ಅಥವಾ ಪಾಲುಹೊಂದಿದ್ದೀರಾ?: ರಾಹುಲ್ ಗಾಂಧಿ
ಅಮಿತ್ ಶಾ ಪುತ್ರನ ಸಂಸ್ಥೆಯ ವಹಿವಾಟು ಹೆಚ್ಚಳ ಆರೋಪ

ಭೋಪಾಲ್, ಅ. 9: ಬಿಜೆಪಿ 2014ರಲ್ಲಿ ಅಧಿಕಾರರಕ್ಕೆ ಬಂದ ಬಳಿಕ ಬಿಜೆಪಿಯ ವರಿಷ್ಠ ಅಮಿತ್ ಶಾ ಪುತ್ರ ಜಯ್ ಶಾ ಅವರ ಮಾಲಕತ್ವದ ಕಂಪೆನಿಯ ವ್ಯವಹಾರ 16 ಸಾವಿರ ಪಟ್ಟು ಹೆಚ್ಚಾಗಿರುವ ಬಗೆಗಿನ ಮಾಧ್ಯಮದ ವರದಿ ಬಗ್ಗೆ ಏನಾದರೂ ಹೇಳಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.
ಮೋದೀಜಿ ನೀವು ವಾಚ್‌ಮ್ಯಾನ್‌ನಂತೆ ನಟಿಸುತ್ತೀರಾ ಅಥವಾ ನೀವು ಕೂಡ ಪಾಲುದಾತರರೇ ? ದಯವಿಟ್ಟು ಹೇಳಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ನೋಟು ನಿಷೇಧದಿಂದ ಯಾರಿಗೆ ಲಾಭವಾಗಿದೆ ಎಂದು ನಮಗೆ ಈಗ ಗೊತ್ತಾಯಿತು. ನೋಟು ನಿಷೇಧದ ಫಲಾನುಭವಿಗಳು ಆರ್‌ಬಿಐ, ಬಡಜನತೆ, ರೈತರು ಅಲ್ಲ. ಅದು ಶಾ ಆ್ಯಂಡ್ ಶಾ. ಜೈ ಅಮಿತ್ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Next Story





