ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ನಲ್ಲಿ ಕೊಡುಗೆಗಳ ಸುರಿಮಳೆ
ಮಂಗಳೂರು, ಅ.10: ಮುಂಬರುವ ಮದುವೆ ಹಾಗೂ ಹಬ್ಬಗಳ ಸೀಸನ್ಗೆ ಗ್ರಾಹಕರನ್ನು ಸ್ವಾಗತಿಸುವ ನಿಟ್ಟಿನಲ್ಲಿ ಖ್ಯಾತ ಚಿನ್ನಾಭರಣಗಳ ಮಳಿಗೆ ‘ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ನಲ್ಲಿ ಗ್ರಾಹಕರಿಗೆ ಕೊಡುಗೆಗಳ ಸುರಿಮಳೆಯನ್ನು ಘೋಷಿಸಲಾಗಿದೆ.
ಮೊಘಲ್ ಕಲೆಕ್ಷನ್ಸ್, ಪರ್ಷಿಯನ್ ಕಲೆಕ್ಷನ್ಸ್, ನೂರ್ ಕಲೆಕ್ಷನ್ಸ್, ಸನಾಕ ಕಲೆಕ್ಷನ್ಸ್... ಇತ್ಯಾದಿ ಅಸಲಿ ಬ್ರಾಂಡೆಡ್ ಪುರಾತನ ಶೈಲಿಯ ವೈವಿಧ್ಯಮಯ ಶೈಲಿಯ ಆಭರಣಗಳ ಬೃಹತ್ ಸಂಗ್ರಹವಿದ್ದು, ‘ಮೇಕಿಂಗ್ ಚಾರ್ಜ್’ ಮೇಲೆ ಶೇ.50ರಷ್ಟು ಫ್ಲಾಟ್ ಡಿಸ್ಕೌಂಟ್ ನೀಡಲಾಗುತ್ತದೆ. ಮದುವೆ ಆಭರಣಗಳ ಮೇಲೆ ಶೇ.3ರಿಂದ ಶೇ.6ರಷ್ಟು ‘ಬರ್ಕತ್ ಆಫರ್’ (ಶುಭ ಹಾರೈಕೆ ಕೊಡುಗೆ) ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದೆ. ಇದರಿಂದ ವಿವಾಹದ ಶುಭಕಾರ್ಯಕ್ಕೆ ನಡೆಸಲಾಗುವ ಆಭರಣ ಖರೀದಿ ಪ್ರಕ್ರಿಯೆ ಈ ಹಿಂದೆಂದಿಗಿಂತಲೂ ಮಿತವ್ಯಯಕಾರಿಯಾಗಲಿದೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ, ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ವಿಶೇಷ ರಿಯಾಯ್ತಿ(ಡಿಸ್ಕೌಂಟ್) ಘೋಷಿಸಲಾಗಿದೆ.
ಮದುವೆ ಸಮಾರಂಭಕ್ಕೆ ಆಭರಣ ಖರೀದಿಸುವ ಪ್ರತಿಯೊಬ್ಬ ಗ್ರಾಹಕರು ಒಂದು ಲಕ್ಕಿ ಡ್ರಾ ಕೂಪನ್ ಪಡೆಯಲು ಅರ್ಹರಾಗುತ್ತಾರೆ. ಅದೃಷ್ಟಶಾಲಿ ವಿಜೇತರು ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳಿಗೆ ಉಚಿತ ಮಧುಚಂದ್ರ(ಹನಿಮೂನ್) ಪ್ರವಾಸದ ಅವಕಾಶ ಪಡೆಯುತ್ತಾರೆ. ಗ್ರಾಹಕರಿಗೆ ಜಿಎಸ್ಟಿ ಹೊರೆಯ ಭಾರ ಕಾರಣ ಗ್ರಾಹಕರಿಗೆ ಹೊರೆ ಬೀಳಬಾರದೆಂದು ಈ ಅಪೂರ್ವ ಕೊಡುಗೆಗಳನ್ನು ಘೋಷಿಸಲಾಗಿದೆ ಎಂದು ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಟಿ.ಎಂ.ಅಬ್ದುಲ್ ರವೂಫ್ ಮತ್ತು ಟಿ.ಎಂ.ಅಬ್ದುಲ್ ರಹೀಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.