ಖಾಸಗಿ ಕ್ಲಿನಿಕ್‌ನಲ್ಲಿ ವ್ಯಕ್ತಿ ಸಾವು: ಆರೋಪ; ಕ್ಲಿನಿಕ್ ಎದುರು ಶವವಿಟ್ಟು ಪ್ರತಿಭಟನೆ

ಬಣಕಲ್, ಅ.10: ಬಾಳೂರು ಹೊರಟ್ಟಿಯ ಕಾರ್ಮಿಕ ವಿಜಯ್(40) ಎಂಬವರು ಬಣಕಲ್ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದ ನಂತರ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಕ್ಲಿನಿಕ್ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.
ಬಣಕಲ್ ಮತ್ತಿಕಟ್ಟೆ ರಸ್ತೆಯಲ್ಲಿರುವ ಖಾಸಗಿ ಕ್ಲಿನಿಕ್‌ಗೆ ಅಸ್ವಸ್ಥಗೊಂಡು ಚಿಕಿತ್ಸೆಗೆಂದು ಅ.8ರಂು ಬಂದಿದ್ದು, ಆ ವೇಳೆ ಕ್ಲಿನಿಕ್‌ನ ಚನ್ನಪ್ಪ ಎಂಬವರು 3 ಇಂಜೆಕ್ಷನ್ ಮತ್ತು ಮಾತ್ರೆಗಳನ್ನು ನೀಡಿದ್ದರು. ಮನೆಗೆ ಹೋದ ತಂತರ ತಡರಾತ್ರಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿನ ವೈದ್ಯರು ಮಂಗಳೂರಿಗೆ ಕರೆದ್ಯೊಯುವಂತೆ ಸೂಚಿಸಿದ್ದರು.
ಮಂಗಳೂರು ಸಾಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಬಣಕಲ್‌ನ ಖಾಸಗಿ ಕ್ಲಿನಿಕ್‌ನ ಚನ್ನಪ್ಪಎಂಬವರು ನೀಡಿದ ಚಿಕಿತ್ಸೆಯಿಂದ ವಿಜಯ್ ಮೃತಪಟ್ಟಿದ್ದಾರೆ ಎಂದು ಕ್ಲಿನಿಕ್ ಎದುರು ಶವವಿಟ್ಟು ಸೋಮವಾರ ಪ್ರತಿಭಟನೆ ನಡೆಸಿದರು.
ಶಾಸಕ ಬಿ.ಬಿ.ನಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿ ಕೂಡ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸತತ ಪ್ರಯತ್ನದ ನಂತರ ಡಿವೈಎಸ್ಪಿ ಶೇಖ್ ಹುಸೈನ್ ಮತ್ತು ಶಾಸಕ ಬಿ.ಬಿ.ನಿಂಗಯ್ಯ ಮತ್ತು ಸ್ಥಳೀಯ ಮುಖಂಡ ಮಾತಿಗೆ ಒಪ್ಪಿಮೃತರ ಸಂಬಂಧಿಕರು ಪ್ರತಿಭಟನೆ ಹಿಂದೆಗೆದುಕೊಂಡರು. ನಂತರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಮೂಡಿಗೆರ ಶವಾಗಾರಕ್ಕೆ ಕಳುಹಿಸಿಕೊಡಲಾಯಿತು.
ಈ ಬಗ್ಗೆ ಬಣಕಲ್ ಠಾಣೆಯಲ್ಲಿ ಮೃತರ ಪತ್ನಿ ದೂರು ನೀಡಿದ್ದು, ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.







