ಕಳವಾದ ಚಪ್ಪಲಿಗಾಗಿ ತನಿಖೆ ಆರಂಭಿಸಿದ ಪೊಲೀಸರು !

ಪುಣೆ, ಅ. 8: ಕಳವು ಅಥವಾ ದರೋಡೆಯ ಪ್ರಾಮಾಣಿಕ ದೂರನ್ನು ದಾಖಲಿಸಿಕೊಳ್ಳಲು ವಿಳಂಬ ಮಾಡುವ ಸನ್ನಿವೇಶವನ್ನು ನಮ್ಮಲ್ಲಿ ಕೆಲವರು ಎದುರಿಸಿರುತ್ತೇವೆ. ಆದರೆ, ಪುಣೆಯ ಗ್ರಾಮೀಣ ಪೊಲೀಸರು ಇದಕ್ಕಿಂತ ಭಿನ್ನ ಎಂದು ತೋರಿಸಿಕೊಟ್ಟಿದ್ದಾರೆ.
ಪುಣೆ ಜಿಲ್ಲೆಯ ಖೇಡ್ ತೆಹ್ಸಿಲ್‌ನ ರಕ್ಷೇವಾಡಿಯ ನಿವಾಸಿಯಾಗಿರುವ ವಿಶಾಲ್ ಕೇಳ್ಕರ್ ಅಕ್ಟೋಬರ್ 3ರಂದು ಪೊಲೀಸ್ ಠಾಣೆಗೆ ತೆರಳಿ ಅಪಾರ್ಟ್‌ಮೆಂಟ್‌ನ ಹೊರಗಡೆ ಇರಿಸಲಾದ ತನ್ನ ಹೊಸ ಚಪ್ಪಲಿಯನ್ನು ಕಳವುಗೈಯಲಾಗಿದೆ ಎಂದು ದೂರಿದ್ದಾರೆ ಹಾಗೂ ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ಸೂಚಿಸಿದ್ದಾರೆ.
ಖೇಡ್ ಪೊಲೀಸರು ಅಪರಿಚಿತ ಕಳ್ಳನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿ ದ್ದಾರೆ. ನಾವು ಕಳವು ಪ್ರಕರಣ ದಾಖಲಿಸಿಕೊಂಡಿದ್ದೇವೆ ಹಾಗೂ ತನಿಖೆ ಆರಂಭಿಸಿದ್ದೇವೆ ಎಂದು ಖೇಡ್ ಪೊಲೀಸ್ ಇನ್ಸ್‌ಪೆಕ್ಟರ್ ಪ್ರದೀಪ್ ಜಾಧವ್ ಹೇಳಿದ್ದಾರೆ.
Next Story





