ಹನೂರು: ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಯುಕನ ರಕ್ಷಣೆ

ಹನೂರು, ಅ.11: ಉಡುತೊರೆ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಗ್ರಾಮಸ್ಥರು ರಕ್ಷಿಸಿದ ಘಟನೆ ಬುಧವಾರ ಪಟ್ಟಣದಲ್ಲಿ ನೆಡದಿದೆ.
ಕ್ಷೇತ್ರ ವ್ಯಾಪ್ತಿಯ ಲೊಕ್ಕನಹಳ್ಳಿ ಉಯಿಲ್‍ನಾಥ ಗ್ರಾಮದ ರುದ್ರ(22) ಪ್ರಾಣಾಪಾಯದಿಂದ ಪಾರಾದ ಯುವಕನೆಮದು ಗುರುತಿಸಲಾಗಿದೆ.
ರುದ್ರ ತಮ್ಮ ದೈನಂದಿನ ಕೆಲಸಕಾರ್ಯಗಳಿಗೆ ಎಂದಿನಂತೆ ತೆರೆಳುತ್ತಿದ್ದಾಗ, ಉಡುತೊರೆ ಹಳ್ಳದಲ್ಲಿ ಮುಳುಗುತ್ತಿದ್ದಾಗ ಕೊಚ್ಚಿ ಹೋಗತ್ತಿದ್ದನ್ನು ಮನಗಂಡ ಸ್ಥಳೀಯರು ಆತನನ್ನು ರಕ್ಷಸಿ ಪ್ರಾಣಾಪಾಯದಿಂದ ಪಾರುಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.
Next Story





