‘ಅನುಕ್ತ’ ಕನ್ನಡ ಚಲನಚಿತ್ರಕ್ಕೆ ಮುಹೂರ್ತ

ಉಡುಪಿ, ಅ.11: ದೇಯಿ ಪ್ರೊಡಕ್ಷನ್ ನಿರ್ಮಾಣದ ‘ಅನುಕ್ತ’ ಕನ್ನಡ ಚಲನ ಚಿತ್ರದ ಮುಹೂರ್ತ ಕಾರ್ಯಕ್ರಮವು ಬುಧವಾರ ಕಟಪಾಡಿ ಮೂಡಬೆಟ್ಟು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೆರವೇರಿತು.
ಮುಖ್ಯ ಅತಿಥಿಯಾಗಿ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮಾತ ನಾಡಿ, ಸಿನೆಮಾಕ್ಕೂ ಕಟಪಾಡಿಗೆ ಬಹುಕಾಲದ ನಂಟಿದೆ. ಇಲ್ಲಿ ಈ ಹಿಂದೆ ಹಲವು ಸಿನೆಮಾಗಳು ನಿರ್ಮಾಣವಾಗಿವೆ. ಕರಾವಳಿ ಜಿಲ್ಲೆಯು ಸಾಕಷ್ಟು ಕಲಾವಿದರನ್ನು ಕನ್ನಡ ಹಾಗೂ ಹಿಂದಿ ಸಿನೆಮಾ ಕ್ಷೇತ್ರಕ್ಕೆ ಒದಗಿಸಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಡಾ.ರವೀಂದ್ರನಾಥ್ ಶೆಟ್ಟಿ ವಹಿಸಿದ್ದರು. ವೇದಮೂರ್ತಿ ಪುತ್ತೂರು ಹಯವದನ ತಂತ್ರಿ ಆಶೀರ್ವಚನ ನೀಡಿದರು. ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬೆಲ್ಕರ್, ದೇವಸ್ಥಾನದ ಅಧ್ಯಕ್ಷ ಕೆ.ಎಂ.ಬಲ್ಲಾಳ್, ಕಟಪಾಡಿ ಗ್ರಾಪಂ ಅಧ್ಯಕ್ಷೆ ಜುಲಿಯೆಟ್ ವೀರ ಡಿಸೋಜ, ಸತೀಶ್ ಶೆಟ್ಟಿ ಪಟ್ಲ, ಪ್ರವೀಣ್ ಕುಮಾರ್ ಕೊಂಚಾಡಿ, ಪಮ್ಮಿ ಕೊಡಿಯಲ್‌ಬೈಲ್, ಧನ್‌ರಾಜ್, ಸರ್ವೋತ್ತಮ ಶೆಟ್ಟಿ, ಹರೀಶ್ ಶೇರಿಗಾರ್, ಸತೀಶ್ ಪೂಜಾರಿ, ಜೋಸೆಫ್ ಮಥಾಯಸ್, ವಾಲ್ಟರ್ ನಂದಳಿಕೆ, ಲೀಲಾಕ್ಷ ಕರ್ಕೇರ, ಶಿವಚರಣ್ ಶೆಟ್ಟಿ, ಅಶೋಕ್ ಸುವರ್ಣ, ಫ್ರಾನ್ಸಿಸ್ ಪಿಂಟೋ, ರಣ್‌ಧೀರ್, ರಾಜೇಶ್ ಬ್ರ ಹ್ಮಾವರ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಅಶ್ವಥ್ ಸ್ಯಾಮುವೆಲ್, ನಿರ್ಮಾಪಕ ದುಬೈಯ ಉದ್ಯಮಿ ಹರೀಶ್ ಬಂಗೇರ, ನಟ ಕಾರ್ತಿಕ್ ಅತ್ತಾವರ, ನಟಿ ಸಂಗೀತ ಭಟ್ ಮೊದ ಲಾದವರು ಉಪಸ್ಥಿತರಿದ್ದರು.





