ಎಲ್ಪೇಲು: ಬಾವಿಗೆ ಬಿದ್ದು ಯುವಕ ಮೃತ್ಯು

ಬಂಟ್ವಾಳ, ಅ. 11: ಯುವಕನೊಬ್ಬ ಮನೆಯ ಮುಂಭಾಗದಲ್ಲಿರುವ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಎಲ್ಪೇಲು ಎಂಬಲ್ಲಿ ನಡೆದಿದೆ.
ಮೃತರನ್ನು ಇಲ್ಲಿನ ನಿವಾಸಿ ಡೊಂಬಯ ಗೌಡ (36) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿದ್ದ ಇವರು ರಾತ್ರಿ ಮನೆ ಅಂಗಳದಲ್ಲಿರುವ ಬಾವಿಯ ಮುಂಭಾಗದಲ್ಲಿ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಾವಿಗೆ ಬಿದ್ದಿದ್ದಾರೆ. ಬಾವಿಗೆ ಸುತ್ತಲೂ ಆವರಣ ಗೋಡೆ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದ್ದು, ತಕ್ಷಣ ಸದ್ದು ಕೇಳಿ ಮನೆಯೊಳಗಿನಿಂದ ಮೃತರ ತಾಯಿ ಮತ್ತು ಸಹೋದರು ಹೊರ ಬಂದು ನೋಡಿದಾಗ ಡೊಂಬಯ ಗೌಡ ನೀರಿನಲ್ಲಿ ಮುಳುಗಿ ಕೆಸರಿನಲ್ಲಿ ಹೂತು ಹೋಗಿರುವುದು ಕಂಡು ಬಂತು. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಕರೆಸಿ ಮೃತದೇಹವನ್ನು ಮೇಲೆಕ್ಕೆತ್ತಲಾಯಿತು ಎಂದು ತಿಳಿದುಬಂದಿದೆ. ಈ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





