ಕೋಮು ಧ್ರುವೀಕರಣಕ್ಕೆ ಪ್ರೋತ್ಸಾಹ ಆರೆಸ್ಸೆಸ್‌ನ ಹುಟ್ಟುಗುಣ: ಸಿಪಿಐಎಂ ಟೀಕೆ

ಹೊಸದಿಲ್ಲಿ, ಅ.11: ಕೇರಳದಲ್ಲಿ ರಾಜಕೀಯ ಪ್ರೇರಿತ ಹಿಂಸಾಚಾರಕ್ಕೆ ಬಿಜೆಪಿ ಕಾರಣ ಎಂದು ಆರೋಪಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಭೀತಿ ಹರಡುವುದು ಹಾಗೂ ಕೋಮು ಧ್ರುವೀಕರಣ ತೀವ್ರಗೊಳಿಸುವುದು ಆರೆಸ್ಸೆಸ್‌ನ ಹುಟ್ಟುಗುಣ ಎಂದು ಟೀಕಿಸಿದ್ದಾರೆ.
ಹಿಂಸಾಚಾರದ ಮೂಲಕ ರಾಜಕೀಯ ನಡೆಸುವ ಸಿದ್ಧಾಂತ ಹೊಂದಿರುವ ಬಿಜೆಪಿಯು ಕೇರಳದಲ್ಲಿ ಹಿಂಸಾಚಾರಕ್ಕೆ ತೊಡಗಿದ್ದು ಸಿಪಿಐಎಂ ಈ ಹಿಂಸಾಚಾರದ ಬಲಿಪಶುವಾಗಿದೆ ಎಂದು ಯೆಚೂರಿ ಹೇಳಿದರು.
ದೇಶದ ಅರ್ಥವ್ಯವಸ್ಥೆಯ ಕುರಿತು ಪ್ರತಿಕ್ರಿಯಿಸಿದ ಅವರು, ಸರಕಾರವು ಕೇವಲ ಮೂರು ವರ್ಷದಲ್ಲೇ ಅರ್ಥವ್ಯವಸ್ಥೆಯನ್ನು ಹಾಳುಗೆಡವಲು ಯಶಸ್ವಿಯಾಗಿದೆ ಎಂದರು. ಬಿಜೆಪಿ ಜನತೆಗೆ ನೀಡಿರುವ ಎಲ್ಲಾ ಆಶ್ವಾಸನೆಗಳನ್ನೂ ಹುಸಿಗೊಳಿಸಿ ಅವರನ್ನು ವಂಚಿಸಿದೆ ಎಂದವರು ದೂರಿದರು.
Next Story





