ರಣವೀರ ಸೇನೆಯ ಪ್ರದೇಶ ಕಮಾಂಡರ್ ಸಹಿತ ಮೂವರ ಹತ್ಯೆ

ಸಸಾರಂ, ಅ. 8: ಕಾನೂನು ಬಾಹಿರ ಖಾಸಗಿ ಸೇನೆ ರಣವೀರ್ ಸೇನೆಯ ನಾಯಕ ಸೇರಿದಂತೆ ಮೂವರು ವ್ಯಕ್ತಿಗಳನ್ನು ಅಪರಿಚಿತ ದುಷ್ಕರ್ಮಿಗಳು ರೊಹ್ಟಾಸ್ ಜಿಲ್ಲೆಯ ದುರ್ಗಾಪುರ ಗ್ರಾಮದಲ್ಲಿ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಣವೀರ ಸೇನೆಯ ಮಾಜಿ ಪ್ರದೇಶ ಕಮಾಂಡರ್ ಧಾಂಜಿ ಸಿಂಗ್, ಅವರ ವಾಹನ ಚಾಲಕ ಶಶಿ ಪಾಂಡೆ ಹಾಗೂ ಅಂಗರಕ್ಷಕ ನಿನ್ನೆ ರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಸಸಾರಂ ಉಪ ವಲಯದ ಪೊಲೀಸ್ ಅಧಿಕಾರಿ ಅಶೋಕ್ ರಂಜನ್ ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story





