ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನಾ ಸಭೆ
.jpg)
ಬಂಟ್ವಾಳ, ಅ. 11: ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಬಿ.ಸಿ.ರೋಡಿನಲ್ಲಿ ಬುಧವಾರ ಪ್ರತಿಭಟನಾ ಸಭೆ ನಡೆಯಿತು.
ಸಂಘ ಪರಿವಾರದ ಮುಖಂಡರ ಮೇಲೆ ವಿನಾ ಕಾರಣವಾಗಿ ಕೇಸು ದಾಖಲಿಸುವುದಲ್ಲದೆ ಗಡಿಪಾರಿಗೆ ಆದೇಶಿಸುವ ಮೂಲಕ ಹಿಂದುತ್ವ ನಾಯಕರ ಮೇಲಿನ ದಮನಕಾರಿ ನೀತಿ, ಹಿಂದುತ್ವ ಚಳವಳಿಯನ್ನು ಹತ್ತಿಕ್ಕುವ, ಧಾರ್ಮಿಕ, ಸಾಮಾಜಿಕ ಆಚರಣೆಗಳಿಗೆ ತಡೆಯೊಡ್ಡುವ ಸರಕಾರದ ಧೋರಣೆಯನ್ನು ಪ್ರತಿಭಟನಕಾರರು ಖಂಡಿಸುವುದಾಗಿ ತಿಳಿಸಿದರು.
ಹಿ.ಜಾ.ವೇ. ದಕ್ಷಿಣ ಕೇಂದ್ರ ಸಂಚಾಲಕ ಜಯ ಕುಮಾರ್ ದಾವಣಗೆರೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಮುಖಂಡರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ದೇವದಾಸ್ ಶೆಟ್ಟಿ, ಜಿ. ಆನಂದ, ರಾಮ್‌ದಾಸ್ ಬಂಟ್ವಾಳ, ದಿನೇಶ್ ಭಂಡಾರಿ, ಭಾಸ್ಕರ್ ಟೈಲರ್, ಹಿ.ಜಾ.ವೇ. ಮುಖಂಡರಾದ ರವಿರಾಜ ಬಿ.ಸಿ.ರೋಡ್, ಜಗದೀಸ್ ಕಾಮಾಜೆ, ದಿವಾಕರ ಭಂಡಾರಿ ನರಿಕೊಂಬು, ಪುರುಷೋತ್ತಮ ಕಾಮಾಜೆ, ಗಣೇಶ್‌ದಾಸ್, ಭಾಸ್ಕರ ಬಂಟ್ವಾಳ ಮೊದಲಾದವರಿದ್ದರು. ಬಳಿಕ ತಹಶಿಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪೂಂಜಾಲಕಟ್ಟೆ: ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಮೂರ್ಜೆಯಿಂದ ಪೂಂಜಾಲಕಟ್ಟೆ, ಪಿಲಾತಬೆಟ್ಟು ಘಟಕದ ವತಿಯಿಂದ ಕಾಲ್ನಡಿಗೆ ಜಾಥಾ ನಡೆಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಬಿ.ಸಿ.ರೋಡಿನ ವಕೀಲ ಪ್ರಸಾದ್ ಕುಮಾರ್ ಮಾತನಾಡಿದರು. ಸ್ಥಳೀಯ ಮುಖಂಡರು ಹಾಜರಿದ್ದರು.





