ಜ್ಯೋತಿಷಿಯ ಮಾತು ಕೇಳಿ ಕಳ್ಳತನ!
ಬೆಂಗಳೂರು, ಅ.11: ತಾನು ಮಂತ್ರಿಸಿದ ನಿಂಬೆಹಣ್ಣು ಇಟ್ಟುಕೊಂಡು ಕಳ್ಳತನ ಮಾಡಿದರೆ, ಪೊಲೀಸರಿಗೆ ಕೈಗೆ ಸಿಗುವುದಿಲ್ಲ ಎಂದು ಜ್ಯೋತಿಷಿಯೊಬ್ಬನ ಮಾತು ಕೇಳಿ ಕಚೇರಿಯೊಂದಕ್ಕೆ ನುಗ್ಗಿ ಕಂಪ್ಯೂಟರ್‌ಗಳನ್ನು ಕದ್ದಿರುವ ಘಟನೆ ಇಲ್ಲಿನ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜ್ಯೋತಿಷಿ ಕೃಷ್ಣರಾಜು, ನೌಕರ ದಾಮೋದರ್ ಹಾಗೂ ಈತನ ಸಹಚರರಾದ ಶರವಣ, ಸೀನು ಮತ್ತು ರಾಮದಾಸ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದು, ಆರೋಪಿಗಳಿಂದ 671 ಮಾನಿಟರ್‌ಗಳು, 10.49 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ: ಏಳು ವರ್ಷದಿಂದ ಸ್ಟೋರ್ ಇನ್‌ಚಾರ್ಜ್ ಆಗಿದ್ದ ಆರೋಪಿ ದಾಮೋದರ್‌ಗೆ ಚಿಕ್ಕದಾಗಿ ಸಾಲ ಇರುವುದಾಗಿ ಹೇಳಿಕೊಂಡು ನಗರದ ಮಲ್ಲಿಗೆ ಆಸ್ಪತ್ರೆ ಬಳಿಯ ಅಶ್ವಥ್ ಕಟ್ಟೆಯ ಬಳಿ ಭವಿಷ್ಯ ಹೇಳುತ್ತಿದ್ದ ಕೃಷ್ಣರಾಜು ಯಾನೆ ಕೃಷ್ಣಸ್ವಾಮಿ ಬಳಿ ಹೋಗುತ್ತಿದ್ದನು. ಅಲ್ಲಿಗೆ ರಾಜೇಂದ್ರ ಎಂಬಾತ ಸಹ ಬರುತ್ತಿದ್ದನು ಎನ್ನಲಾಗಿದೆ.
ಜ್ಯೋತಿ ಕೃಷ್ಣರಾಜು, ಆಷಾಢ ಮಾಸ ಕಳೆದ ಮೇಲೆ ಶ್ರಾವಣದಲ್ಲಿ ಒಳ್ಳೆ ಭವಿಷ್ಯವಿದೆ. ನಾನು ಹೇಳಿದ ಹಾಗೆ ಮಾಡಿದರೆ ನಿನ್ನ ಕಷ್ಟಗಳನ್ನು ಪರಿಹರಿಸಿಕೊಂಡು ನೆಮ್ಮದಿಯಿಂದ ಬದುಕಬಹುದೆಂದು ದಾಮೋದರ್‌ನನ್ನು ಮರಳು ಮಾಡಿದ್ದಾನೆ. ರಾಜೇಂದ್ರನ ಜೊತೆ ಸೇರಿ ನೀನು ಕೆಲಸ ಮಾಡುವ ಕಂಪೆನಿಗೆ ಬರುವ ಮಾನಿಟರ್‌ಗಳನ್ನು ಮಾರಾಟ ಮಾಡು ಅದರಿಂದ ಬರುವ ಹಣದಲ್ಲಿ ಸ್ವಲ್ಪ ಹಣವನ್ನು ನನಗೆ ನೀಡು. ಇದು ಯಾರಿಗೂ ಗೊತ್ತಾಗುವುದಿಲ್ಲ ಎಂದು ನಿನ್ನ ಭವಿಷ್ಯ ವಾಣಿ ನುಡಿಯುತ್ತಿದೆ ಎಂದು ನಿಂಬೆ ಹಣ್ಣುಗಳನ್ನು ಮಂತ್ರಿಸಿ ದಾಮೋದರ್‌ಗೆ ಜ್ಯೋತಿಷಿ ನೀಡಿದ್ದನು.
ಜ್ಯೋತಿ ಕೃಷ್ಣರಾಜು, ಆಷಾಢ ಮಾಸ ಕಳೆದ ಮೇಲೆ ಶ್ರಾವಣದಲ್ಲ ಒಳ್ಳೆವಿಷ್ಯವಿದೆ. ನಾನು ಹೇಳಿದ ಹಾಗೆ ಮಾಡಿದರೆ ನಿನ್ನಕಷ್ಟಗಳನ್ನು ಪರಿಹರಿಸಿಕೊಂಡು ನೆಮ್ಮದಿಯಿಂದ ಬದುಕಬಹುದೆಂದು ದಾಮೋದರ್‌ನನ್ನು ಮರಳುಮಾಡಿದ್ದಾನೆ. ರಾಜೇಂದ್ರನ ಜೊತೆ ಸೇರಿ ನೀನು ಕೆಲಸ ಮಾಡುವ ಕಂಪೆನಿಗೆ ಬರುವ ಮಾನಿಟರ್‌ಗಳನ್ನು ಮಾರಾಟಮಾಡು ಅಂದು ನಿನ್ನವಿಷ್ಯವಾಣಿ ನುಡಿಯುತ್ತಿದೆ ಎಂದು ನಿಂಬೆ ಹಣ್ಣುಗಳನ್ನು ಮಂತ್ರಿಸಿ ದಾಮೋದರ್‌ಗೆ ಜ್ಯೋತಿಷಿ ನೀಡಿದ್ದನು. ದಾಮೋದರ್ ಇದನ್ನೆ ನಂಬಿ ತನ್ನ ಬಾಮೈದ ರಾಮ್‌ದಾಸ್ ಹಾಗೂ ಸ್ವಂತ ವಾಹನವನ್ನು ಬ್ಲೂ ಡಾಟ್ ಕಂಪೆನಿಗೆ ಬಾಡಿಗೆಗೆ ನೀಡಿದ್ದ ಆರೋಪಿಗಳಾದ ಶರವಣ ಮತ್ತು ಸೀನುನನ್ನು ಕರೆಸಿಕೊಂಡು ಸ್ವಾಮೀಜಿಯಿಂದ ಅವರಿಗೂ ಭವಿಷ್ಯವನ್ನ ಹೇಳಿಸಿ ಮಾನಿಟರ್‌ಗಳನ್ನು ಮಾರಾಟ ಮಾಡಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಜ್ಯೋತಿಷಿ ಕೃಷ್ಣರಾಜು, ದಾಮೋದರ್ ಮತ್ತು ರಾಜೇಂದ್ರ ಸೇರಿ ಕಂಪ್ಯೂಟರ್ ಮತ್ತು ಮಾನಿಟರ್‌ಗಳನ್ನು ತಮಗೆ ಪರಿಚಯವಿದ್ದ ಅರವಿಂದ ಎಂಬವರಿಗೆ ಕಂಪೆನಿಯ ವಸ್ತು ಹಾಗೂ ಜಿಎಸ್‌ಟಿ ಸಮಸ್ಯೆ ಇದೆ ಎಂದು ನಂಬಿಸಿ ಈತನ ಮುಖಾಂತರ ಎಸ್ಪಿ ರಸ್ತೆಯ ವಿವಿಧ ಅಂಗಡಿ ಮಾಲಕರಿಗೆ ಮಾರಾಟ ಮಾಡಿಸಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸೂರು ಮುಖ್ಯರಸ್ತೆಯಲ್ಲಿರುವ ಸೂಪರ್‌ಟ್ರಾನ್ ಎಲೆಕ್ಟ್ರಾನಿಕ್ಸ್ ಕಂಪೆನಿಯು ಡೆಲ್ ಕಂಪೆನಿಯ ಟಿಎಫ್‌ಟಿ ಮಾನಿಟರುಗಳ ಅಧಿಕೃತ ಹಂಚಿಕೆ ಮತ್ತು ಮಾರಾಟಗಾರರಾಗಿರುತ್ತಾರೆ.
ಈ ಕಂಪೆನಿಯ ಬೇಡಿಕೆ ಮೇರೆಗೆ ತಮಿಳುನಾಡಿನ ಪೆರಂಬದೂರಿನಿಂದ ಒಂದು ಸಾವಿರ ಮಾನಿಟರ್‌ಗಳು, ಬ್ಲೂ ಡಾರ್ಟ್ ಕಂಪೆನಿಯ ಶಿಪ್‌ಮೆಂಟ್ ಮುಖಾಂತರ ಆ.3ರಂದು ಮತ್ತು ಆ.11ರಂದು ಸೂಪರ್ ಟ್ರಾನ್ ಕಂಪೆನಿಗೆ ಡೆಲಿವರಿ ಆಗಬೇಕಿದ್ದ 58.79 ಲಕ್ಷ ಬೆಲೆ ಬಾಳುವ ಮಾನಿಟರ್‌ಗಳು ಬರದಂತೆ ಮಾಡಿದ್ದ ಸೂಪರ್‌ಟ್ರಾನ್ ಸ್ಟೋರ್ ಇನ್‌ಚಾರ್ಜ್ ದಾಮೋದರ್, ಕಂಪನಿಗೆ ದ್ರೋಹವೆಸಗಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.







