ಸರಕಾರ ಪುರಾವೆ ಸಲ್ಲಿಸದಿದ್ದರೆ ಹಫೀಝ್ ಬಿಡುಗಡೆ: ಲಾಹೋರ್ ಹೈಕೋರ್ಟ್

ಲಾಹೋರ್, ಅ. 11: ಮುಂಬೈ ದಾಳಿಯ ಸೂತ್ರಧಾರ ಹಫೀಝ್ ಸಯೀದ್ ವಿರುದ್ಧ ಪಾಕಿಸ್ತಾನ ಸರಕಾರ ದಾಖಲೆ ಸಲ್ಲಿಸದಿದ್ದರೆ, ಅವನ ಗೃಹಬಂಧನವನ್ನು ರದ್ದುಪಡಿಸಲಾಗುವುದು ಎಂದು ಲಾಹೋರ್ ಹೈಕೋರ್ಟ್ ಎಚ್ಚರಿಸಿದೆ.
ಜಮಾಅತ್ ಉದ್‌ದಾವಾ ಸಂಘಟನೆಯ ಮುಖ್ಯಸ್ಥ ಸಯೀದ್ ಜನವರಿ 31ರಿಂದ ಗೃಹ ಬಂಧನದಲ್ಲಿದ್ದಾನೆ.
ತನ್ನ ಬಂಧನವನ್ನು ಪ್ರಶ್ನಿಸಿ ಅವನು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಲಾಹೋರ್ ಹೈಕೋರ್ಟ್ ಮಂಗಳವಾರ ನಡೆಸಿತು.
ಗೃಹ ಕಾರ್ಯದರ್ಶಿಯು ಇತರ ನಾಲ್ವರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಬೇಕಾಗಿತ್ತು.
ಆದರೆ, ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಅವರು ಗೃಹ ಕಾರ್ಯದರ್ಶಿ ವಿಫಲರಾದರು.
ಇದರಿಂದ ಅತೃಪ್ತಗೊಂಡ ನ್ಯಾಯಾಲಯವು, ಪತ್ರಿಕಾ ವರದಿಗಳ ತುಣುಕುಗಳ ಆಧಾರದಲ್ಲಿ ಯಾವುದೇ ನಾಗರಿಕನನ್ನು ಹೆಚ್ಚು ಸಮಯ ಬಂಧನಲ್ಲಿಡಲು ಸಾಧ್ಯವಿಲ್ಲ ಎಂದು ಹೇಳಿತು.
Next Story





