ರಾ.ಹೆ.66ರ ಸಮಸ್ಯೆ ಚರ್ಚಿಸಲು ಗ್ರಾಮಸಭೆ
ಉಡುಪಿ, ಅ.11: ಕಾಪು ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುವ ಗ್ರಾಮಗಳಲ್ಲಿ ಹೆದ್ದಾರಿ ಸಮಸ್ಯೆಗಳ ಕುರಿತು ಚರ್ಚಿಸಲು ಗ್ರಾಮ ಸಭೆಗಳನ್ನು ಕರೆಯಲಾಗಿದೆ.
ಅ.17ರಂದು ಬೆಳಗ್ಗೆ 10:30ಕ್ಕೆ ಹೆಜಮಾಡಿ ಗ್ರಾಪಂ ಮತ್ತು ಅಪರಾಹ್ನ 3ಗಂಟೆಗೆ ಪಡುಬಿದ್ರಿ ಗ್ರಾಪಂ, 21ರಂದು ಬೆಳಗ್ಗೆ 10:30ಕ್ಕೆ ತೆಂಕ ಗ್ರಾಪಂ ಮತ್ತು ಅಪರಾಹ್ನ 3ಗಂಟೆಗೆ ಬಡಾ ಗ್ರಾಪಂ, 24ರಂದು ಬೆಳಗ್ಗೆ 10:30ಕ್ಕೆ ಉದ್ಯಾವರ ಗ್ರಾಪಂ ಮತ್ತು ಅಪರಾಹ್ನ 3ಗಂಟೆಗೆ ಕಟಪಾಡಿ ಮತ್ತು ಇನ್ನಂಜೆ ಗ್ರಾಪಂಗಳಲ್ಲಿ ವಿಶೇಷ ಗ್ರಾಮಸಭೆ ನಡೆಯಲಿವೆ.
ಈ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಯೋಜನಾ ನಿರ್ದೇಶಕರು, ಸ್ಥಳೀಯ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಂಬಂಧಿಸಿದ ಪೊಲೀಸ್ ಠಾಣಾ ಉಪ ನಿರೀಕ್ಷಕರು ಹಾಗೂ ಕಂದಾಯ ನಿರೀಕ್ಷಕರು ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story





