ಮಾಂಗಲ್ಯ ಸರ ಕಸಿದು ಪರಾರಿ
ಮದ್ದೂರು, ಅ.12: ಗೃಹಿಣಿಯ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಇಲ್ಲಿನ ಶಿವಪುರ ಬಳಿ ಬುಧವಾರ ತಡರಾತ್ರಿ ನಡೆದಿದೆ.
ಮಂಡ್ಯ ನಗರ ನಿವಾಸಿ ಸೌಮ್ಯ ಮಾಂಗಲ್ಯಸರ ಕಳೆದುಕೊಂಡವರು. ಇವರು ಮದುವೆ ಕಾರ್ಯ ಮುಗಿಸಿಕೊಂಡು ಬಸ್‍ನಿಲ್ದಾಣದಲ್ಲಿ ನಿಂತಿದ್ದಾಗ, ದುಷ್ಕರ್ಮಿ ಈ ಕೃತ್ಯವೆಸಗಿದ್ದಾನೆ.
ಸರ ಕಳೆದುಕೊಂಡ ಸೌಮ್ಯ ಮಂಡ್ಯ ಠಾಣೆಯೊಂದರಲ್ಲಿ ಕಾನ್‍ಸ್ಟೇಬಲ್ ಎಂದು ತಿಳಿದುಬಂದಿದ್ದು, ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





